ಮಾರುತಿ ಸುಜುಕಿ ಎಲೆಕ್ಟ್ರಿಕ್‌ ಎಸ್‌ಯುವಿ ಇ-ವಿಟಾರಾ ಮಾರುಕಟ್ಟೆಗೆ ಬಿಡುಗಡೆ.

ಪುಣೆ: ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್‌ ಎಸ್‌ ಯುವಿ ಇ-ವಿಟಾರಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್‌ ವಾಹನಗಳ ಬೃಹತ್‌ ಉತ್ಪಾದನೆಯೇ ತಮ್ಮ ಗುರಿಯಾಗಿದ್ದು, ಈ ಮೂಲಕ ಮುಂದಿನ ಒಂದು ವರ್ಷದೊಳಗೆ ಭಾರತ ಎಲೆಕ್ಟ್ರಿಕ್‌ ವಾಹನಗಳ ರಫ್ತು ಕೇಂದ್ರವನ್ನಾಗಿ ಮಾಡುವ ಇಚ್ಛೆ ಹೊಂದಿರುವುದಾಗಿ ಮಾರುತಿ ಸುಜುಕಿ ತಿಳಿಸಿದೆ.

ಟಾಟಾ ಮೋಟಾರ್ಸ್‌, ಮಹೀಂದ್ರ ಮತ್ತು ಎಂಜಿ ಮೋಟಾರ್‌ ವಿರುದ್ಧ ಇದೀಗ ಜಪಾನಿನ ದೈತ್ಯ ಕಂಪನಿ ಸ್ಪರ್ಧೆಗಿಳಿದಿದೆ.