ಮಲ್ಪೆ: ಮಹಿಳೆಯ ಮೊಬೈಲ್, ನಗದು ಕಳವು; ಆರೋಪಿಯ ಬಂಧನ

ಉಡುಪಿ: ಮೋಟಾ‌ರ್ ಸೈಕಲ್ ನಲ್ಲಿ ಬಂದು ಸರಸ್ವತಿ (21) ಎಂಬ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಹಾಗೂ 2500 ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ದರ್ಶನ್ ಕುಮಾರ್‌ ತೊಟ್ಟಂ ಬಂಧಿತ ಆರೋಪಿ.ಈತ ಸರಸ್ವತಿ ಎಂಬ ಮಹಿಳೆ, ಕೆಳಾರ್ಕಳಬೆಟ್ಟು- ಸಂತೆಕಟ್ಟೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದು ಕೃತ್ಯ ಎಸಗಿದ್ದ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 13,000 ಸಾವಿರ ಬೆಲೆಯ ಮೊಬೈಲ್ ಹಾಗೂ ರೂ. 2,500 ನಗದನ್ನು ವಶಕ್ಕೆ ಪಡೆದಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ