ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ; ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ- ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಗೆ ಹಲ್ಲೆ ನಡೆಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಹಲ್ಲೆ ನಡೆಸುವುದು ತಪ್ಪು. ಸಣ್ಣ ತಪ್ಪಿಗೆ ಆ ರೀತಿ ಹೊಡೆಯುವುದು ಸರಿಯಲ್ಲ. ಮಹಿಳೆಗೆ ಹೊಡೆಯುತ್ತಿದ್ದಾರೆ ಅಲ್ಲಿ ಸೇರಿರುವ ಜನರು ನಗುತ್ತಾ ನಿಂತಿದ್ದಾರೆ. ಯಾರು ತಡೆಯಲು‌ ಮುಂದಾಗುತ್ತಿಲ್ಲ. ಈ ರೀತಿಯಾಗಿ ನಮ್ಮ ಮನಸ್ಥಿತಿ ಹೋದರೆ ಕಷ್ಟ. ಯಾರಿಗೋ ಒಬ್ಬರಿಗೆ ಹಿಂಸೆ ಆಗುತ್ತಿದ್ದರೆ ನಗುವುದು, ಖುಷಿ ಪಡುವುದು ತಪ್ಪು. ನಮ್ಮ ಸಮಾಜ ಯಾವ ಕಡೆಗೆ ಹೋಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ‌. ಇನ್ಮುಂದೆ ಇಂತಹ ಘಟನೆ ನಡೆಯಬಾರದು ಎಂದರು.