ಉಡುಪಿ: ಮೂಡುತೋನ್ಸೆ ಗ್ರಾಮದ ನೇಜಾರಿನ ರಾಜೀವನಗರ ನಿವಾಸಿ ಅಶೋಕ್ (50) ಎಂಬವರು ವಿಪರೀತ ಮದ್ಯ ಸೇವನೆಯ ಚಟದಿಂದ ಖಿನ್ನತೆ ಹೊಂದಿ ಜೀವನದಲ್ಲಿ ಜಿಗುಪ್ಸೆಗೊಂಡು ಅ.16ರಂದು ಬೆಳಗ್ಗೆ 10ರಿಂದ ಅಪರಾಹ್ನ 1 ಗಂಟೆ ನಡುವಿನ ಅವಧಿಯಲ್ಲಿ ತನ್ನ ರೂಮಿನ ಪ್ಯಾನ್ಗೆ ಬೈರಾಸ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.