ಮಧ್ಯರಾತ್ರಿ ಉಡುಪಿಗೆ ಆಗಮಿಸಿದ ಲಾರಿ ಚಾಲಕ ಅರ್ಜುನ್ ಮೃತದೇಹ

ಉಡುಪಿ: ಶಿರೂರು ಗುಡ್ಡ ಕುಸಿತದಿಂದ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಮೃತದೇಹ ಮಧ್ಯರಾತ್ರಿ ಉಡುಪಿಗೆ ಆಗಮಿಸಿತ್ತು.

ಉತ್ತರಕನ್ನಡ ಜಿಲ್ಲಾಡಳಿತ ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ರವಾನಿಸುವ ಬದಲು ಬಟ್ಟೆಯಲ್ಲಿ ಬಿಡಿಬಿಡಿಯಾಗಿ ಕಟ್ಟಿ ಕಳುಹಿಸಿಕೊಟ್ಟಿತ್ತು. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮೃತದೇಹ ರವಾನಿಸುವ ಮೂಲಕ‌ ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯ ವಹಿಸಿದೆಯೇ ಎಂಬ ಆರೋಪ ಕೇಳಿಬಂದಿದೆ.

ಉಡುಪಿಯ ಕೇರಳ ಸಮಾಜ ಬಾಂಧವರು ಮತ್ತು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ಈಶ್ವರ್ ಮಲ್ಪೆ ಅವರು ಮೃತದೇಹ ಕಳುಹಿಸಿಕೊಡಲು ಫ್ರೀಜರ್ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಿಕೊಟ್ಟರು. ಬಳಿಕ ಅರ್ಜುನ್ ತವರೂರು ಕೋಝಿಕ್ಕೋಡ್ ಗೆ ಮೃತದೇಹ ರವಾನೆ ಮಾಡಲಾಯಿತು. ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ಸೇರಿದ್ದ ಜನಸ್ತೋಮ ಮೃತ ಅರ್ಜುನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಎರಡು ದಿನಗಳ ಹಿಂದೆ ಗಂಗಾವಳಿಯಲ್ಲಿ ನದಿಯಲ್ಲಿ ಅರ್ಜುನ್ ಮೃತದೇಹ ಸಿಕ್ಕಿತ್ತು.