ಮಣಿಪಾಲ: ಹೆಲ್ಮಟ್ ಇಲ್ಲದೆ ವಿದ್ಯಾರ್ಥಿಗಳ ಅಪಾಯಕಾರಿ ತ್ರಿಬಲ್ ರೈಡಿಂಗ್; ಟ್ರಾಫಿಕ್‌ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳ ಟ್ರಾಫಿಕ್ ರೂಲ್ ಬ್ರೇಕ್ ಪ್ರಕರಣಗಳು ಸಾಮಾನ್ಯವಾಗಿದೆ. ಅಂತಹದ್ದೇ ಒಂದು ಪ್ರಕರಣದ ದೃಶ್ಯ ಈಗ ವೈರಲ್ ಆಗುತ್ತಿದೆ.

ಮಣಿಪಾಲ ಟೈಗರ್ ಸರ್ಕಲ್ ಬಳಿ ಓರ್ವ ಯುವತಿ ಹಾಗೂ ಇಬ್ಬರು ಯುವಕರು ತ್ರಿಬಲ್ ರೈಡಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಯುವಕರ ಮಧ್ಯೆ ಹೆಲ್ಮೆಟ್ ಇಲ್ಲದೆ ಯುವತಿಯೊಬ್ಬಳು ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸವಾರಿ ಮಾಡಿದ್ದಾಳೆ. ರಾತ್ರಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ರೂಲ್ ಬ್ರೇಕ್ ಮಾಡ್ತಾರೆ. ವೀಕೆಂಡ್ ನಲ್ಲಿ ಮೋಜು ಮಸ್ತಿ ನಿರತ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ.

ಈ ರೀತಿ ರೂಲ್ ಬ್ರೇಕ್ ಮಾಡುವ ಯುವಕ ಯುವತಿಯರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.