ಮಣಿಪಾಲ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ

ಉಡುಪಿ: ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಿನಿಂದ ಬಂದ ವ್ಯಕ್ತಿಯೋರ್ವ ಸುಲಿಗೆ ಮಾಡಿಕೊಂಡು ಪರಾರಿಯಾದ ಘಟನೆ ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ನಡೆದಿದೆ.
ಶಾಂತಾ ಕಾಮತ್ (84) ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಬೆಳಿಗ್ಗೆೆ 7 ಗಂಟೆಗೆ ಕೆಲಸಕ್ಕೆೆಂದು ಹೋಗುತ್ತಿದ್ದರು. ಸಗ್ರಿನೋಳೆ ಶಾಲೆ ರಸ್ತೆೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಂಡೇಲು ಎಂಬಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ ಚಿನ್ನದ ಚೈನ್ ಅನ್ನು ಕಸಿದುಕೊಂಡಿದ್ದಾನೆ. ಈ ವೇಳೆ ಅವರು ಆತನನ್ನು ಹಿಡಿಯಲು ಯತ್ನಿಸಿದರೂ ಆತ ಚೈನ್ ಸಹಿತ ಪರಾರಿಯಾಗಿದ್ದಾನೆ. ಈ ವೇಳೆ ಶಾಂತಾ ಕಾಮತ್ ಅವರ ಕೈಗೆ ಗಾಯವಾಗಿದೆ. ಸುಮಾರು 20ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.