ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿರುವ ನಗರಸಭೆಗೆ ಸೇರಿದ ಕುಡಿಯುವ ನೀರಿನ ಪಂಪ್ ಹೌಸ್ ಜಾಗ ಇದೀಗ ಅಪಘಾತದ ತಾಣವಾಗಿದ್ದು ತಡರಾತ್ರಿ ಸಮಯದಲ್ಲಿ ಮತ್ತೆ ಕಾರೊಂದು ಹೊಂಡಕ್ಕೆ ಬಿದ್ದಿದೆ.
ಉಡುಪಿ ನೋಂದಣಿಯ ಕಾರು ಮಧ್ಯರಾತ್ರಿ ನಿಯಂತ್ರಣ ತಪ್ಪಿ ಪಂಪ್ ಹೌಸ್ ಬಳಿ ಹೊಂಡಕ್ಕೆ ಬಿದ್ದಿದೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರು. ಮಧ್ಯರಾತ್ರಿ ಮಣಿಪಾಲ ಪೊಲೀಸರು ಬಂದು, ವಾಹನವನ್ನು ತೆಗೆಯುವಲ್ಲಿ ಸಹಕರಿಸಿದರು.
ಕಳೆದ ಶನಿವಾರವಷ್ಟೇ ವಿವಿಧ ನಂಬರ್ ಪ್ಲೇಟ್ ಸಂಖ್ಯೆ ಇರುವ ಕಾರು ಇದೇ ಜಾಗದಲ್ಲಿ ಬಿದ್ದಿತ್ತು. ಇದೇ ಜಾಗದಲ್ಲಿ ಮತ್ತೆ ಮತ್ತೆ ಅಪಘಾತಗಳು ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












