ಮಣಿಪಾಲ: ಇಲ್ಲಿನ ಡಾ. ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಫೆ. 22 ಬೆಳಿಗ್ಗೆ 10 ರಿಂದ 4 ರವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಡಾ. ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆ ಹಾಗೂ ಯಶನ್ ಮ್ಯಾನೆಜ್ ಮೆಂಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರಿನ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಆಟೊಮೊಬೈಲ್, ಸಿವಿಲ್, ಕಂಪ್ಯೂಟರ್ ಸಾಯನ್ಸ್, ಎಲೆಕ್ಟ್ರಿಕಲ್, ಮೆಕಾನಿಕಲ್, ಪ್ರಿಂಟಿಂಗ್ ಟೆಕ್ನಾನಜಿ ಮೊದಲಾದ ತಾಂತ್ರಿಕ ವಿಭಾಗದಲ್ಲಿ ಡಿಪ್ಲೋಮಾ ಪಾಸ್/ಫೈಲ್ ಆದವರು, ಐಟಿಐ, ಯಾವುದೇ ಮೂರುವರ್ಷದ ಪದವಿ ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಉದ್ಯೋಗಮೇಳದಲ್ಲಿ 20 ಕ್ಕೂ ಹೆಚ್ಚಿನ ಕಂಪೆನಿಗಳು ಭಾಗವಹಿಸಲಿದೆ. ಆಸಕ್ತರು ಫೆ.19 ರ ಮೊದಲು ರಿಜಿಷ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಉದ್ಯೋಗ ಮೇಳಕ್ಕೆ ಭಾಗವಹಿಸುವವರು ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆ, ಅಂಕಪಟ್ಟಿಗಳನ್ನು ತರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 7795390389 (ವಾಟ್ಯಾಪ್ ಮಾತ್ರ) ಮೇಲ್[email protected]












