ಉಡುಪಿ: ಮಣಿಪಾಲ ಕರಾವಳಿಯ ವಿದ್ಯಾಕೇಂದ್ರವಾಗಿ ಬಹಳ ಪ್ರಸಿದ್ದಿ ಪಡೆದ ನಗರ. ದೇಶವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ನಗರದ ಹೃದಯಭಾಗದಲ್ಲೇ ಖಾಸಗಿ ಬಸ್ ಸಿಬ್ಬಂದಿ ಟೈಮ್ ವಿಚಾರವಾಗಿ ಬೀದಿಕಾಳಗ ನಡೆಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಕೈಯಲ್ಲಿ ರಾಡ್.. ಕಲ್ಲು ಹಿಡಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ. ಒಬ್ಬನನ್ನು ಇಬ್ಬರು ಸೇರಿ ನೆಲಕ್ಕೆ ಉರುಳಿಸಿದ್ದಾರೆ. ಈ ಭೀಕರ ಮಾರಾಮಾರಿ ಕಂಡು ಸಾರ್ವಜನಿಕರು ತದೇಕಚಿತ್ತರಾಗಿ ನೋಡಿದ್ದಾರೆ. ಪರಸ್ಪರ ಅವಾಚ್ಯವಾಗಿ ಬೈದಾಡಿ ಕಂಡಕ್ಟರ್‌ಗಳ ಜಂಗಿ ಕುಸ್ತಿಯ ದೃಶ್ಯ ವೈರಲ್ ಆಗುತ್ತಿದೆ. ಅಂದಹಾಗೆ ಮಣಿಪಾಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದೆ.












