ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ: ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಪಟ್ಲ ಯುಎಸ್ ನಾಯಕ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ವರ್ಷ ಅವಧಿಯ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವು ಬುಧವಾರ ಮುಕ್ತಾಯಗೊಂಡಿತು.

ಓರೇನ್ ಇಂಟರ್ನ್ಯಾಷನಲ್’ನ ಬ್ಯೂಟಿ ಆ್ಯಂಡ್ ವೆಲ್‌ನೆಸ್, ಐಟಿ ಸ್ಕಿಲ್ಸ್, ಡ್ರೋನ್ ಟೆಕ್ನಾಲಜಿ, ಡ್ರೀಮ್ಸ್ ಜೋನ್ ಫ್ಯಾಶನ್ ಡಿಸೈನಿಂಗ್, ಎಲೆಕ್ಟ್ರಿಕ್ ವೆಹಿಕಲ್ & ಆಟೋಮೆಟಿವ್ ಸ್ಕಿಲ್ ವಿಷಯಗಳ ಕುರಿತು ಕಾರ್ಯಾಗಾರ ನಡೆಸಲಾಯಿತು. ಸುಮಾರು 37 ಪಟ್ಲ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಲ ಯುಎಸ್ ನಾಯಕ್ ಹೈಸ್ಕೂಲ್’ನ ಶಿಕ್ಷಕ ಸದಾನಂದ, ಎಂಎಸ್ ಡಿಸಿ ರಿಜಿಸ್ಟ್ರಾರ್ ಡಾ.ಅಂಜಯ್ಯ ದೇವಿನೇನಿ, ಅಡ್ಮಿಷನ್ ಆಫೀಸರ್ ಎಂಎಸ್‌ಟಿಸಿ ಡಾ. ನಾರಾಯಣ್ ಶೆಣೈ, ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಮ್ಯಾನೇಜರ್ ನೀತಾ ಶೆಟ್ಟಿ, ಕೌನ್ಸಿಲರ್ ಶ್ರುತಿ ಉಪಸ್ಥಿತರಿದ್ದರು.