ಮಣಿಪಾಲ: ಇಂಜಿನಿಯರಿಂಗ್ ಪದವಿಯ ಕನಸು ಹೊತ್ತ ಆಸಕ್ತ ವಿದ್ಯಾರ್ಥಿಗಳ ಮೂರು ವರ್ಷಗಳ ಡಿಪ್ಲೊಮಾ ಪೂರೈಸಿದ ನಂತರ ಯಾವುದೇ ಪ್ರವೇಶ ಪರೀಕ್ಷೆಯ ಒತ್ತಡವಿಲ್ಲದೆ ಲ್ಯಾಟರಲ್ ಎಂಟ್ರಿ ಮೂಲಕ ಎಂ.ಐ.ಟಿ ಯಲ್ಲಿ ಇಂಜಿನಿಯರಿಂಗ್ ಎರಡನೇ ವರ್ಷಕ್ಕೆ ನೇರ ಪ್ರವೇಶ ಅವಕಾಶವನ್ನು ಸಂಸ್ಥೆಯ ಮೂಲಕ ಒದಗಿಸಲಾಗುತ್ತಿದೆ.ಲ್ಯಾಟರಲ್ ಎಂಟ್ರಿ ಪಡೆದ ವಿದ್ಯಾರ್ಥಿಗಳಿಗೆ ಎಂ.ಐ.ಟಿ ವಿದ್ಯಾ ಸಂಸ್ಥೆಯಲ್ಲಿ ಒಟ್ಟು ಶೇಕಡಾ ಎಪ್ಪತ್ತೈದರಷ್ಟು ಶುಲ್ಕವನ್ನು ರಿಯಾಯಿತಿ ನೀಡಲಾಗುತ್ತಿದ್ದು,ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಐಟಿಐ ಶಿಕ್ಷಣ ಪೂರೈಸಿದ ಎನ್‌ಸಿವಿಟಿ ಅಥವಾ ಎನ್‌ಟಿಸಿ ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಲಭ್ಯವಿರುವ 8 ವಿಭಾಗಗಳಾದ
- ಅಟೋ ಮೊಬೈಲ್ ಇಂಜಿನಿಯರಿಂಗ್,
- ಸಿವಿಲ್ ಇಂಜಿನಿಯರಿಂಗ್
- ಕಂಪ್ಯೂಟರ್ ಇಂಜಿನಿಯರಿಂಗ್
- ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್
- ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
- ಮೆಕಾನಿಕಲ್ ಇಂಜಿನಿಯರಿಂಗ್
- ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್
- ಪ್ರಿಂಟಿಂಗ್ ಟೆಕ್ನಾಲಜಿ
ವಿಭಾಗವನ್ನು ಹೊಂದಿದ್ದು, ವಿದ್ಯಾರ್ಥಿಗಳ ಆಯ್ಕೆಯ ಯಾವುದೇ ವಿಭಾಗಕ್ಕೆ ನೇರವಾಗಿ ದ್ವೀತಿಯ ವರ್ಷಕ್ಕೆ ಪ್ರವೇಶಕ್ಕೆ ಅವಕಾಶವಿದೆ.
ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲಾಭಿವೃದ್ಧಿಗಾಗಿ ಕಾಲೇಜು ಆವರಣದಲ್ಲಿಯೇ ಎನ್‌ಎಸ್‌ಡಿಸಿ ಸಂಯೋಜಿತ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಅಂತರ್ ರಾಷ್ಟ್ರೀಯ ಗುಣಮಟ್ಟದ ವಿವಿಧ 18 ವಿಭಾಗಗಳ ಕೌಶಲ್ಯ ತರಬೇತಿ ಕೇಂದ್ರವು ಈ ವರ್ಷದಿಂದ ಕಾರ್ಯಾರಂಭವಾಗಿದೆ. ವಿದ್ಯಾರ್ಥಿಗಳ ಆಯ್ಕೆಯ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಹವಾನಿಯಂತ್ರಿತ ಹಾಗೂ ಹವಾ ನಿಯಂತ್ರಣರಹಿತ, ವಸತಿಗೃಹ, ಉಪಹಾರ ಗೃಹಗಳ ವ್ಯವಸ್ಥೆ ಇದೆ ಮತ್ತು ಜುಲೈ 15 ಸೋಮವಾರದ ವರೆಗೆ ಪ್ರವೇಶಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಸಾಲ ಸೌಲಭ್ಯ ಮತ್ತು ಪ್ರವೇಶಾತಿ ಬಗ್ಗೆ ಮಾಹಿತಿಗಾಗಿ ಕಾಲೇಜಿನ ಆಡಳಿತ ಕಚೇರಿಯ ದೂರವಾಣಿ
ಸಂಖ್ಯೆ: 98447 29291, 74831 82179, 83102 76314 ಅಥವಾ ಇಮೇಲ್ admission tmapai polytechnic.edu.in ಮೂಲಕ ಸಂಪರ್ಕಿಸಬಹುದು.