ಮಣಿಪಾಲ: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ.

ಮಣಿಪಾಲ: ವಿದ್ಯಾರ್ಥಿ ವ್ಯವಹಾರಗಳ ವಿಭಾಗ, ಮಣಿಪಾಲ ವಿಶ್ವ ವಿದ್ಯಾಲಯ ಹಾಗೂ ಮಣಿಪಾಲ ಪೋಲಿಸ್ ರವರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಯನ್ನು ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ದಿನ ಜೂನ್ 26ರಂದು ಆಚರಿಸಲಾಯಿತು.

ಮಣಿಪಾಲದ ವಿಶ್ವವಿದ್ಯಾಲಯದ ಭದ್ರತಾ ಅಧಿಕಾರಿ ಕರ್ನಲ್ ವಿಜಯ್ ರೆಡ್ಡಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಇವರು ಮಾದಕ ವಸ್ತುಗಳಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಿದರು.

ದೇವರಾಜ್ ಟಿವಿ ಪೊಲೀಸ್ ಇನ್ಸ್ಪೆಕ್ಟರ್ ಮಣಿಪಾಲ್ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಇವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ. ಮಾದಕ ದ್ರವ್ಯಗಳು ಹಾಗೂ ಅದರ ದುರುಪಯೋಗ ಮತ್ತು ಸಂಬಂಧಪಟ್ಟ ಕಾನೂನುಗಳ ಕುರಿತು ಉದಾಹರಣೆಯೊಂದಿಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಡಾಕ್ಟರ್ ಗೀತಾಮಯ್ಯ ನಿರ್ದೇಶಕರು ವಿದ್ಯಾರ್ಥಿ ವ್ಯವಹಾರಗಳ ವಿಭಾಗ ಮಾಹೆ, ಎಲ್ಲರನ್ನೂ ಸ್ವಾಗತಿಸಿ ಇಂಥ ಕಾರ್ಯಕ್ರಮದ ಮಹತ್ವವನ್ನು ಹಾಗೂ ತಮ್ಮ ವಿಭಾಗದಿಂದ ನಡೆಯುವ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಡಾಕ್ಟರ್ ಅರವಿಂದ್ ಪಾಂಡೆ ಉಪ ನಿರ್ದೇಶಕರು ವಿದ್ಯಾರ್ಥಿ ವ್ಯವಹಾರಗಳ ವಿಭಾಗ ಮಾಹೆ ಇವರು ವಂದನಾರ್ಪಣೆಗೈದರು ಶ್ರೀಮತಿ ಶಿಲ್ಪಾ ಜೋಶಿ ವಿದ್ಯಾರ್ಥಿಗಳ ಆಪ್ತ ಸಮಾಲೋಚಕರು ಮಾಹೆ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡರು.