ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನಲ್ಲಿ ಪೌಷ್ಟಿಕಾಂಶ ಸಮಾವೇಶ.

ಉಡುಪಿ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ನ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟೆಟಿಕ್ಸ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟಿಷನ್ ಮತ್ತು ಡಯೆಟೆಟಿಕ್ಸ್ ವಿಭಾಗದ ಸಹಯೋಗದೊಂದಿಗೆ ಶಾರದಾ ಹಾಲ್‌, ಎಂ ಸಿ ಎಚ್ ಪಿ ನಲ್ಲಿ” ಪೌಷ್ಟಿಕಾಂಶ ಸಮಾವೇಶ 2024″ ಆಗಸ್ಟ್ 21 ರಂದು ಯಶಸ್ವಿಯಾಗಿ ನಡೆಯಿತು.

ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರಗಳು ಎಂಬ ಧ್ಯೇಯದೊಂದಿಗೆ, ಎಲ್ಲಾ ಜೀವನ ಹಂತಗಳಲ್ಲಿ ಜನರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರಕ್ರಮವನ್ನು ಪ್ರೋತ್ಸಾಹಿಸುವ ಮೇಲೆ ಕೇಂದ್ರೀಕೃತವಾದ ಸಮಾವೇಶದಲ್ಲಿ, ರೋಗಿಗಳ ಪೌಷ್ಟಿಕಾಂಶದ ನಿರ್ವಹಣೆಯಲ್ಲಿ ಆಗಿರುವ ಸುಧಾರಣೆ ಹಾಗೂ ಹೊಸ ಪರಿಕಲ್ಪನೆಗಳನ್ನೊಳಗೊಂಡ ಸಂಶೋಧನೆಗಳ ಬಗ್ಗೆ ಸಮಗ್ರ ಅವಲೋಕನ ಮಾಡಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು,ಪಥ್ಯಾಹಾರ ತಜ್ಞರು ಸೇರಿದಂತೆ 250 ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಲಾಯಿತು.

ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ಮುಖ್ಯ ಅತಿಥಿಗಳಾಗಿದ್ದರು. ಅವರು ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪೌಷ್ಟಿಕಾಂಶದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು ಮತ್ತು ಕ್ಷೇತ್ರದಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳನ್ನು ತಿಳಿಸುವ ಕಾರ್ಯಕ್ರಮವನ್ನು ನಡೆಸುತ್ತಿರುವ ವಿಭಾಗವನ್ನು ಶ್ಲಾಘಿಸಿದರು.

ಸಮಾವೇಶದ ಸಂಯೋಜಕರಾದ ಸುವರ್ಣ ಹೆಬ್ಬಾರ್ ಇವರು ಕಾರ್ಯಕ್ರಮದ ಸ್ಥೂಲ ಚಿತ್ರಣವನ್ನು ನೀಡಿದರು. ಎಂ ಸಿ ಎಚ್ ಪಿ ಡೀನ್ ಡಾ .ಜಿ .ಅರುಣ್ ಮೈಯ್ಯ ಅವರು ದೇಹದ ಮೌಲ್ಯಮಾಪನ ಮತ್ತು ಅದರ ವ್ಯಾಖ್ಯಾನ, ವ್ಯಕ್ತಿಯ ಪೌಷ್ಟಿಕಾಂಶ ಸ್ಥಿತಿಯನ್ನು ತಿಳಿಸುವಲ್ಲಿ ಹೇಗೆ ಸಹಕಾರಿಯಾಗಿದೆ ಮತ್ತು ಅದಕ್ಕಾಗಿ ಇರುವ ಹೊಸ ತಂತ್ರಜ್ಞಾನ ಗಳ ಕುರಿತು ವಿವರಿಸಿದರು. ಇದರ ನಂತರ ಬೆಂಗಳೂರಿನ ಟ್ರಸ್ಟ್‌ವೆಲ್ ಆಸ್ಪತ್ರೆಗಳ ಮುಖ್ಯ ಕ್ಲಿನಿಕಲ್ ಡಯೆಟಿಷಿಯನ್ ಶ್ರೀಮತಿ ವೆಂಕಟರಾಮನ್ ಅವರು “ಕ್ರಿಟಿಕಲ್ ಕೇರ್ ನ್ಯೂಟ್ರಿಷನ್‌ನಲ್ಲಿ ಉದಯೋನ್ಮುಖ ಪರಿಕಲ್ಪನೆಗಳು.” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಮಧ್ಯಾಹ್ನ, ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಶ್ರೀಮತಿ ಭಕ್ತಿ ಸಮಂತ್ ಅವರು “ಡಿಕೋಡಿಂಗ್ ಡಯಾಗ್ನೋಸ್ಟಿಕ್ಸ್,” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸದ ನಂತರ ಪ್ರಶ್ನೋತ್ತರಗಳ ಸಂವಾದವು ಉಪಯುಕ್ತವಾಗಿತ್ತು. ಸಹಾಯಕ ಪ್ರಾಧ್ಯಾಪಕರಾದ ದಕ್ಷ ಕುಮಾರಿ ಸ್ವಾಗತಿಸಿದರು. ಕಾರ್ಯಕ್ರಮದ ಬಳಿಕ ಸಹಾಯಕ ಪ್ರಾಧ್ಯಾಪಕಿ ಅಮೃತ ವಂದನಾರ್ಪಣೆ ಗೈದರು.

ರಾಷ್ಟೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 1 ರಂದು ಶ್ರೀಕೃಷ್ಣಬಾಲ ನಿಕೇತನ ಆಶ್ರಮಕ್ಕೆ ಭೇಟಿ ನೀಡಿದ್ದು, ಸೆ. 3,5 ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸ್ಟಾಫ್ ನರ್ಸ್ ಹಾಗೂ ಪಿ. ಆರ್.ಇ ಗಳಿಗಾಗಿ ಪೌಷ್ಟಿಕಾಂಶ ಮೌಲ್ಯ ಮಾಪನ ಶಿಬಿರವನ್ನು ಹಂಬಿಕೊಳ್ಳಲಾಗಿತ್ತು.

ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ನ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟೆಟಿಕ್ಸ್ ವಿಭಾಗದ ಉಪನ್ಯಾಸಕರು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಪಥ್ಯಾಹಾರ ತಜ್ಞರು ಎಲ್ಲ ಕಾರ್ಯಕ್ರಮಗಳಿಗೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನೆಡೆಸಿದರು.