ಮಣಿಪಾಲದ ‘ಹೊಟೇಲ್ ಆಶ್ಲೇಷ್’ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್ ನಲ್ಲಿ ನಾಳೆ ನೂತನ ಎಕ್ಸಿಕ್ಯೂಟಿವ್‌ ರೂಮ್‌ಗಳ ಉದ್ಘಾಟನೆ

ಮಣಿಪಾಲ: ಎಂಐಟಿ ಎದುರಿನ ಗಣೇಶ್ ಶೆಣೈಯವರ ಮಾಲಕತ್ವದ ಸಮುಚ್ಚಯದಲ್ಲಿರುವ ಕೆಎಸ್ ಟಿಡಿಸಿಯಿಂದ ಅನುಮೋದಿಸಲ್ಪಟ್ಟ ಹೊಟೇಲ್ ಆಶ್ಲೇಷ್ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್‌ನ 3ನೇ ಮಹಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಎಕ್ಸಿಕ್ಯೂಟಿವ್ ರೂಮ್‌ಗಳ ಉದ್ಘಾಟನೆ ಕಾರ್ಯಕ್ರಮವು ವಜ್ರ ಎಸಿ ಹಾಲ್‌ನಲ್ಲಿ ಡಿ. 18ರ ಸಂಜೆ 5ಕ್ಕೆ ನಡೆಯಲಿದೆ.

‘ರಾಗ್ ರಂಗ್’ ಮ್ಯೂಸಿಕಲ್ ಬೊನಾಂಝಾ

ಹಿನ್ನೆಲೆ ಗಾಯಕ ರವೀಂದ್ರ ಪ್ರಭು ಅವರ ನೇತೃತ್ವದಲ್ಲಿ ಸಂಜೆ 6ರಿಂದ ‘ರಾಗ್ ರಂಗ್ ಮ್ಯೂಸಿಕಲ್ ಬೊನಾಂಝಾ ನಡೆಯಲಿದ್ದು, ಗಿಟಾರ್‌ನಲ್ಲಿ ರಾಜ್‌ಗೋಪಾಲ್‌, ರಿದಮ್ ಪ್ಯಾಡ್‌ನಲ್ಲಿ ರಾಜೇಶ್ ಭಾಗವತ್, ಗಾಯಕರಾಗಿ ರೇಷ್ಮಾ ಮಂಜುನಾಥ್, ಸೌಮ್ಯಾ ಭಟ್, ಕೊಳಲು ವಾದನದಲ್ಲಿ ಲೋಕೇಶ್ ಸಂಪಿಗೆ, ಕೀಬೋರ್ಡ್‌ನಲ್ಲಿ ಗುರುರಾಜ್‌ ಎಂ.ಜಿ. ತಬಲಾದಲ್ಲಿ ಪ್ರದೀಪ್‌ ಆಚಾರ್ಯ ಸಹಕರಿಸಲಿದ್ದು, ವಿಜೇತಾ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆನರಾ ಲ್ಯಾಂಡ್ ಇನ್ ವೆಸ್ಟ್‌ಮೆಂಟ್‌ನ ಸಿಎಂಡಿ ಟಿ. ಅಶೋಕ್ ಪೈ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು. ಉಪಸ್ಥಿತರಿರುವರು.

ಉಡುಪಿ ತಾಲೂಕು ಅನುಷ್ಠಾನಗಳ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಡಿಜಿಎಂ ಶೀಬಾ ಸಹಜಾನ್, ಬಂಟ್ವಾಳ ಪುರಸಭೆ ಸದಸ್ಯ ಎ. ಗೋವಿಂದ ಪ್ರಭು ಮಣಿಪಾಲ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟ‌ರ್ ದೇವರಾಜ್ ಟಿ.ವಿ., ಕೆನರಾ ಬ್ಯಾಂಕ್ ನಿವೃತ್ತ ಜಿಎಂ ಕೆ. ಬಾಲಚಂದ್ರ ರಾವ್, ಬೆಂಗಳೂರು ಟೋನ್ಸ್ ಟೆಲಿಕಾಂನ ಸ್ಥಾಪಕರು ಮತ್ತು ಸಿಇಒ ಟಿ. ಶ್ರೀಧರ ಪೈ, ಬಿಎನ್‌ಐ ಮಂಗಳೂರು, ಉಡುಪಿಯ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್‌ ಎನ್. ಶರ್ಮ, ಉಡುಪಿ ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಣರಾಜ್ ಭಟ್, ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಬಿಎನ್ಐ ಮಾಬೆನ್, ವಜ್ರ-ಉಡುಪಿಯ ಉಪಾಧ್ಯಕ್ಷ ಐರೋಡಿ ಅನಂತ ಪೈ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಹೊಟೇಲ್‌ನ ಮಾಲಕರಾದ ಶ್ರುತಿ ಜಿ. ಶೆಣೈ ಮತ್ತು ಪಿ. ಗಣೇಶ್ ಶೆಣೈ ತಿಳಿಸಿದ್ದಾರೆ.