ಉಡುಪಿ: ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಮತ್ತು ಗ್ಯಾಲರಿ ಯಲ್ಲಿ 150 ಅಡಿ ವಿಸ್ತೀರ್ಣದಲ್ಲಿ ರಚಿಸಲ್ಪಟ್ಟ “ಮೊನಾಲಿಸಾ” ರಂಗೋಲಿ ಕಲಾರಸಿಕರ ಕಣ್ಮನ ಸೆಳೆಯಿತು.
ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ನಿರ್ದೇಶನದಲ್ಲಿ ಕಲಾ ವಿದ್ಯಾರ್ಥಿಯರಾದ ಉಜ್ವಲ್ ನಿಟ್ಟೆ, ಅನೂಷ ಆಚಾರ್ಯ, ಅಶ್ವಿನಿ ಶೆಟ್ಟಿ, ಮೀತಾ ಪೈ ಅವರು ರಚಿಸಿದ ಈ ಆಕರ್ಷಕ ರಂಗೋಲಿ ಕಲಾವಿದರ ಮನಸೂರೆಗೊಳಿಸಿತು.












