ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನದ ಪುನಃ ಪ್ರತಿಷ್ಠಾಪನೆ ಮಹೋತ್ಸವ ಜ.31ರಿಂದ ಫೆ.3ರ ತನಕ ಜರಗಲಿದೆ.
ಜ.31ರಂದು ಬೆಳಿಗ್ಗೆ ವಾರ್ಷಿಕೋತ್ಸವ ಅಂಗವಾಗಿ ಶ್ರೀ ದೇವಿಗೆ – ಬ್ರಹ್ಮಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾಯಾಗ, ಫೆ.1ರಂದು ವಿವಿಧಹೋಮ,2ರಂದು ಬೆಳಗ್ಗೆ ಶ್ರೀ ನಾಗದೇವರ ಪ್ರತಿಷ್ಠಾಪನೆ, ಸಂಜೆ ಆಶ್ಲೇಷಾ ಬಲಿ, 3ರ ಬೆಳಗ್ಗೆ ಬ್ರಹ್ಮಕಲಶಾಭಿಷೇಕ, ಸಂದರ್ಶನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿ, ಹೃಷಿಕೇಶ ಬಾಯರಿ ” ನೇತೃತ್ವದಲ್ಲಿ ಜರಗಲಿದೆ.
ಆದಿಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರ ನೆನಪಿನಲ್ಲಿ ದಾನಿಗಳಾದ ವಿಶಾಲಾಕ್ಷಿ ಮತ್ತು ಕುಟುಂಬ ಜೀರ್ಣೋದ್ಧಾರಗೊಳಿಸಿ ಪುನಃ ಪ್ರತಿಷ್ಠಾಪನೆಗೊಳಿಸಲಿದ್ದಾರೆ. ದೇಗುಲದ ವತಿಯಿಂದ ಕೃಷ್ಣಮೂರ್ತಿ ಮಂಜ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಹಾಗೂ ಇಒ ಜಯಮ್ಮ ಪಿ. ತಿಳಿಸಿದ್ದಾರೆ.












