ಮಂಗಳೂರು ವಿಶ್ವ ಕೊಂಕಣಿ ಕೇಂದ್ರ : ಸಿ ಎ ಪವರ್ 25 – ಯುನಿಕ್ ರೆಸಿಡೆನ್ಶಿಯಲ್ ಪ್ರೋಗ್ರಾಮ್

ಮಂಗಳೂರು:ವಿಶ್ವ ಕೊಂಕಣಿ ಕೇಂದ್ರದ ಹಾಗೂ ತ್ರಿಶಾ ಕ್ಲಾಸಸ್, ವಿದ್ಯಾಕಲ್ಪಕ ಮತ್ತು ಯುಕೆ & ಕೋ. (UK &Co) ಸಹಯೋಗದಲ್ಲಿ ಸಿಎ ಆಕಾಂಕ್ಷಿಗಳನ್ನು ಆಧರಿಸುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರಿನಲ್ಲಿ ‌ಸಿ ಎ ಫೈನಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ “ಸಿಎ ಪವರ್ 25” ಎನ್ನುವ 51 ದಿನಗಳ ತರಬೇತಿಯನ್ನು ಆಯೋಜಿಸಿದೆ.

ಗ್ರೂಪ್ 1 ಹಾಗೂ ಗ್ರೂಪ್ 2ರ ತರಗತಿಗಳು ಜನವರಿ 17 ರಿಂದ ಮಾರ್ಚ್ 8ರ ವರೆಗೆ ನಡೆಯಲಿದ್ದು ,ಮೇ 2025ರಲ್ಲಿ ಸಿಎ ಫೈನಲ್ ಪರೀಕ್ಷೆಯನ್ನು ಬರೆಯಬಹುದಾಗಿದೆ.

ತರಬೇತಿಯ ವೈಶಿಷ್ಟ್ಯತೆಗಳು

  • ಬೆಂಗಳೂರು,ಹೈದರಾಬಾದ್ ,ಮುಂಬೈಯ ಪ್ರಸಿದ್ಧ ವಿಷಯ ತಜ್ಞರಾದ ಸಿಎ ಜೈ ಚಾವ್ಲಾ, ಸಿಎ ಪ್ರಶಾಂತ್ ಸರ್ದಾ, ಸಿಎ ಕರಣ್ ಮನ್ಸುಖಾನಿ, ಸಿಎ ಪುನರ್ವಸ್ ಜಯಮುರಾ, ಸಿಎ ಶಿವ ತೇಜ ಟಿ, ಸಿಎ ಸೂರಜ್ ಲಖೋಟಿಯಾರಿಂದ ತರಬೇತಿ
  • ಕಡಿಮೆ ಅವಧಿಯಲ್ಲಿ ಎಲ್ಲಾ ವಿಷಯಗಳ ಸಂಪೂರ್ಣ ಅಧ್ಯಯನ
  • ಅಧ್ಯಯನದ ಸಾಮಾಗ್ರಿಗಳ ಪೂರೈಕೆಗಳೊಂದಿಗೆ ಉಚಿತ ವಸತಿ ಸೌಲಭ್ಯ

ಆಸಕ್ತ ವಿದ್ಯಾರ್ಥಿಗಳು ಈ ಲಿಂಕ್ ನ ಮೂಲಕ https://forms.gle/VZWDJu9WrKohTsf77 ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಮಂಗಳೂರಿನ ತ್ರಿಶಾ ಕ್ಲಾಸಸ್, ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ ಭೇಟಿ ನೀಡಬಹುದು.