ಮಂಗಳೂರು: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದ ಸಹಪಾಠಿಗಳು; ಆಸ್ಪತ್ರೆ ದಾಖಲು.

ಮಂಗಳೂರು: ಶಾಲೆಗೆ ಹೋಗುತ್ತಿದ್ದ ಬಾಲಕನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ಬಾಲಕನ ಮರ್ಮಾಂಗವನ್ನು ಹಿಡಿದೆಳೆದರು:
ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ವಸತಿ ನಿಲಯದಲ್ಲಿ ಶಾಲೆಗೆ ಹೋಗುತ್ತಿದ್ದು ಸೆ.14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು.

ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಪರಿಣಾಮ ಮನೆಗೆ ಬಂದಿದ್ದನು. ಬಾಲಕ ಮರ್ಮಾಂಗ ಊದಿಕೊಂಡಿದ್ದರಿಂದ ತಾಯಿಯೊಡನೆ ವಿಷಯ ತಿಳಿಸಿದನೆನ್ನಲಾಗಿದೆ. ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.