ಮಂಗಳೂರು: ಬೈಕ್ ಅಪಘಾತ; ಕಾಲೇಜ್ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು.

ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎ.ಜೆ ಆಸ್ಪತ್ರೆ ಬಳಿ ಸೆ.20ರಂದು ಸಂಜೆ ನಡೆದಿದೆ.

ಮೃತ ಯುವಕನನ್ನು ಯೆನಪೋಯ ಕಾಲೇಜ್ ನ ವಿದ್ಯಾರ್ಥಿಯಾದ ಮೇಲ್ಕಾರ್ ಸಮೀಪದ ರೆಂಗೇಲ್ ನಿವಾಸಿ ಜಾಸೀಮ್ (20) ಎಂದು ಗುರುತಿಸಲಾಗಿದೆ.

ಸಹ ಸವಾರನಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.