ಮಂಗಳೂರು: ಎದೆಯ ಮೇಲಿನ ಗುಳ್ಳೆಯ ಹಿನ್ನೆಲೆಯಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಕಂಕನಾಡಿಯಲ್ಲಿರುವ “ಫ್ಲಾಂಟ್” ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್‌ಗೆ ಆರೋಗ್ಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ವೈದ್ಯರ ನಿರ್ಲಕ್ಷ್ಯ ವೇ ಕಾರಣ:
ಈ ಕ್ಲಿನಿಕ್‌ಗೆ ಕಾಸ್ಮೆಟಿಕ್ ಸರ್ಜರಿಗೆಂದು ಉಳ್ಳಾಲದ ಮುಹಮ್ಮದ್ ಮಾಝಿನ್ ತೆರಳಿದ್ದರು. ಆದರೆ ಸರ್ಜರಿ ವೇಳೆ ಮಾಝಿನ್ ಮೃತಪಟ್ಟಿದ್ದ. ಯುವಕನ ಮರಣಕ್ಕೆ ಕ್ಲಿನಿಕ್‌ನ ವೈದ್ಯರ ನಿರ್ಲಕ್ಷ್ಯ ವೇ ಕಾರಣವೆಂದು ಮಾಝಿನ್ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಕ್ಲಿನಿಕ್‌ಗೆ ಬೀಗ ಜಡಿದಿದೆ. ವೈದ್ಯರ ನಿರ್ಲಕ್ಷ್ಯ ಮತ್ತು ಕ್ಲಿನಿಕ್‌ನಲ್ಲಿ ಮೂಲಸೌಕರ್ಯ ದ ಕೊರತೆ ಘಟನೆಗೆ ಕಾರಣವೆಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ತನಿಖೆಗೆ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ತಿಳಿದು ಬಂದಿದೆ.