ಮಂಗಳೂರು: ಗ್ಲೋಟಚ್ ಟೆಕ್ನಾಲಜಿ ಪ್ರೈ.ಲಿ. ವತಿಯಿಂದ ಗ್ರಾಜುಯೇಟ್ ಇಂಜಿನಿಯರಿಂಗ್ ಟ್ರೈನಿಂಗ್ ಹುದ್ದೆಗೆ ನೇರ ಸಂದರ್ಶನವನ್ನು ಅ.16ರಂದು ಕಾವೂರಿನ ಕಿಂಗ್ಸ್ ಪಾರ್ಕ್ ಲೇಔಟ್ನಲ್ಲಿ ನಡೆಯಲಿದೆ.
ನೇರ ಸಂದರ್ಶನದಲ್ಲಿ ಬಿಇ, ಬಿಟೆಕ್, ಬಿಸಿಎ, ಬಿಎಸ್ಸಿ , ಎಂಸಿಎ, ಎಂ ಎಸ್ಸಿ, ಡಿಪ್ಲೋ ಮೋ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.












