ಮಂಗಳೂರು: ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದ ಎಡ್ಡಿ ಸಿಕ್ವೇರಾ ಇವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಶನಿವಾರ, ಆ. 31 ರಂದು ಸಂಜೆ 6.00ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಬಿಡುಗಡೆ ಮಾಡಲಿರುವರು.
ಮೈಕಲ್ ಡಿ ಸೊಜಾ ಟ್ರಸ್ಟ್ ಇದರ ಸಲಹೆದಾರ ಸ್ಟೀಫನ್ ಪಿಂಟೊ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್. ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಕೃತಿಕಾರ ಎಡ್ಡಿ ಸಿಕ್ವೇರಾ, ಮತ್ತು ಖ್ಯಾತ ರಂಗ ಕಲಾವಿದೆ ಜೀನಾ ಡಿ ಸೋಜಾ ಆಯ್ದ ನಾಟಕ ದೃಶ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಲಿರುವರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಪ್ರಕಾಶನವು ಪ್ರೊ| ಡಾ| ವಿದ್ಯಾ ವಿನುತ ಡಿ ಸೊಜಾ ಇವರ ನೇತೃತ್ವದಲ್ಲಿ ’ನವ್ ರಂಗ್’ ಕೃತಿಯನ್ನು, ವಿಶ್ವ ಕೊಂಕಣಿ ಕೇಂದ್ರದ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯಡಿ ಪ್ರಕಟಿಸಿದ್ದು, ಎಡ್ಡಿ ಸಿಕ್ವೇರಾ ಅವರ ಮೂರು ಪ್ರಶಸ್ತಿ ವಿಜೇತ ನಾಟಕ ಕೃತಿಗಳು, ನಾಲ್ಕು ಜನಪ್ರಿಯ ಕಿರು ನಾಟಕಗಳು ಮತ್ತು ಕೊಂಕಣಿ ನಾಟಕದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಸ್ತುತಪಡಿಸಿದ ಎರಡು ಅಧ್ಯಯನ ಪ್ರಬಂದಗಳನ್ನು ಒಳಗೊಂಡಿದೆ.
160 ಪುಟಗಳ ಪುಸ್ತಕದ ಮುಖಬೆಲೆ ರೂ. 200/- ಆಗಿದ್ದು, ಬಿಡುಗಡೆಯ ದಿನ ರಿಯಾಯತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಲಭ್ಯವಿದೆ.