ಜ. 12ರಂದು ಮಂಗಳೂರಿನಲ್ಲಿ ‘ರಾಮಂ ಭಜೇ’ ಸೂರ್ಯಗಾಯತ್ರಿ ಅವರಿಂದ ಸಂಗೀತದ ಮೂಲಕ ರಾಮಾರಾಧನೆ

ಮಂಗಳೂರು: ಏಮ್ ಫಾರ್ ಸೇವಾ ಸಂಸ್ಥೆಯು ತನ್ನ ಚಾರಿಟಿ ಕಾರ್ಯಕ್ರಮಗಳಿಗೆ ಪೂರಕವಾಗಿ ಜ.12ರ ಸಂಜೆ 6.೦೦ರಿಂದ ಮಂಗಳೂರಿನ ಪುರಭವನದಲ್ಲಿ ನಗರದ ಸಂಗೀತ ಭಾರತಿ ಪ್ರತಿಷ್ಠಾನದ
ಸಹಯೋಗದೊಂದಿಗೆ ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ ಎಂಬ ಪರಿಕಲ್ಪನೆಯೊಂದಿಗೆ `ರಾಮಂ ಭಜೇ ಎಂಬ ಸಂಗೀತ ಕಾರ್ಯಕ್ರಮವನ್ನು
ಆಯೋಜಿಸಿದ್ದು, ದೇಶದ ಹೆಸರಾಂತ ಯುವ ಕಲಾವಿದೆ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ನಡೆಯಲಿದೆ.

Oplus_131072

ಏಮ್ ಫಾರ್ ಸೇವಾ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯ
ಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ ಪ್ರತಿಬಾನ್ವಿತ ಯುವ ಕಲಾವಿದೆ, ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸುಶ್ರಾವ್ಯ ಸಂಗೀತದಿಂದ
ಹೆಸರುವಾಸಿಯಾಗಿರುವ ಸೂರ್ಯಗಾಯತ್ರಿ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Oplus_131072

ಸೂರ್ಯಗಾಯತ್ರಿ ಅವರು ನಾನಾ ಹಾಡುಗಳ ಮೂಲಕ ರಾಮಾರಾಧನೆಯನ್ನು ಮಾಡಲಿದ್ದು, ಇದಕ್ಕೆ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡ ವಿ| ಸುಂದರ ರಾಜನ್ ಅವರು ವೀಣೆ, ವಿ| ಆದರ್ಶ ಅಜಯ್ ಕುಮಾರ್ ಅವರು ವಯೋಲಿನ್, ವಿ| ಪಿ.ವಿ. ಅನಿಲ್ ಕುಮಾರ್ ಅವರು ಮೃದಂಗ, ಪಂ| ಪ್ರಶಾಂತ್
ಶಂಕರ್ ಅವರು ತಬಲ, ಶೈಲೇಶ್ ಮಾರರ್ ಅವರು ತಾಳವಾದ್ಯದಲ್ಲಿ ಸಹಕರಿಸಲಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡಲು ಬಹು-ಪ್ರಕಾರದ, ಬಹು-ಭಾಷಾ ಸಂಗೀತ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ.

ಏಮ್ ಫಾರ್ ಸೇವಾ:
ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರು ಚಿಂತಕ, ತತ್ವಜ್ಞಾನಿ, ಆಧ್ಯಾತ್ಮಿಕ ಶಿಕ್ಷಕ ಮತ್ತು ವೇದಾಂತದ ಶ್ರೇಷ್ಠ ಗುರುಗಳಲ್ಲಿ ಒಬ್ಬರು. ತಮಿಳುನಾಡಿನ ತಿರುವರೂರು ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಮಂಜಕ್ಕುಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಅವರು, ಗ್ರಾಮೀಣ ಭಾರತದ ಮಹಿಳೆಯರ ಸಬಲೀಕರಣ ಹಾಗೂ
ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಅಲ್ ಇಂಡಿಯಾ ಮೂವ್‌ಮೆಂಟ್ ಆಫ್ ಸೇವಾ (ಏಮ್ ಫಾರ್ ಸೇವಾ) ಸಂಸ್ಥೆಯನ್ನು ಸ್ಥಾಪಿಸಿದರು.

ಪ್ರಸ್ತುತ ನಮ್ಮ ದೇಶದ 17 ರಾಜ್ಯಗಳಲ್ಲಿ 95 ಛಾತ್ರಾಲಯಗಳನ್ನು ಸ್ಥಾಪಿಸಿ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.

ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಶಿಕ್ಷಕರಾಗಿ, ಚಿಂತಕರಾಗಿ ಬೆಳೆದು, ವಿಶ್ವ ಪ್ರಮುಖ ವೇದಿಕೆಯಲ್ಲಿ ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರು ತಮ್ಮ
ಪ್ರಭಾವವನ್ನು ಹೊಂದಿದ್ದರು. ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ಪಡೆದ ಅವರು, ಏಮ್ ಫಾರ್ ಸೇವಾ, ಸ್ವಾಮಿ ದಯಾನಂದ ಶೈಕ್ಷಣಿಕ ಟ್ರಸ್ಟ್ (ಎಸ್‌ಡಿಇಟಿ), ಆರ್ಷ ವಿದ್ಯಾ ರಿಸರ್ಚ್ ಮತ್ತು ಪಬ್ಲಿಕೇಷನ್ ಟ್ರಸ್ಟ್ ಮತ್ತು ಏಮ್ ಫಾರ್ ಸೇವಾ
ಸಂಸ್ಥೆಯು ಭಾರತ ಮತ್ತು ಅಮೇರಿಕಾದಾದ್ಯಂತ 25 ಕ್ಕೂ ಮಿಗಿಲಾಗಿ ಘಟಕವನ್ನು ಹೊಂದಿದೆ.