ಮಂಗಳೂರು, ಜೂ.13: ಶತಮಾನಗಳ ಹಿಂದೆ ಕನ್ನಡ ರಂಗಭೂಮಿ ಕಂಪನಿ ನಾಟಕಗಳಲ್ಲಿ ನೈಜ ಒಂಟೆ ಮತ್ತು ಆನೆಗಳನ್ನು ಬಳಸಿ ಮನರಂಜನೆ ನೀಡುವಷ್ಟು ಶ್ರೀಮಂತವಾಗಿತ್ತು. ಇಂದು, ಸರಳ ತಂತ್ರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ನಾಟಕಗಳನ್ನು ಹೊಂದಿಸಲಾಗಿದೆ. ಆದರೆ ಈಗ, ಕಲಾಭಿ(ರಿ )ಸಂಸ್ಥೆ ಹಳೆಯ ಸಂಪ್ರದಾಯವನ್ನು ಪ್ರೇಕ್ಷಕರಿಗೆ ನೆನಪಿಸುವಲ್ಲಿ ಯಶಸ್ವೀಯಾಗಿದ್ದಾರೆ. ಮಂಗಳೂರಿನಲ್ಲಿ ನಿಜವಾದ ಆನೆಗಳನ್ನು ವೇದಿಕೆಗೆ ತರುವಲ್ಲಿ ಕಲಾಭಿ ತಂಡ ಮತ್ತೆ ಯಶಸ್ಸು ಕಂಡಿದೆ.
ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಕಲಾಭಿ ರಂಗೋತ್ಸವದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಶ್ರವಣ್ ಹೆಗ್ಗೋಡು ನಿರ್ದೇಶನದ “ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್” ಎಂಬ ಅಪೂರ್ವ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಜಪಾನ್‌ನ ಬುರ್ನಾಕು ಬೊಂಬೆ ಪ್ರದರ್ಶನ ತಂತ್ರವನ್ನು ಕಲಿತು ನುರಿತ ಕಲಾವಿದರನ್ನು ಒಳಗೊಂಡಂತೆ, ನಾಟಕವು ತನ್ನ ಅತ್ಯುತ್ತಮ ವೇದಿಕೆ, ಅದ್ಭುತ ಸಂಗೀತ ಮತ್ತು ಅನೇಕ ವಿಶೇಷ ತಂತ್ರಗಳು ಮತ್ತು ವಿಶೇಷ ಬೆಳಕಿನಿಂದ ಅಪಾರ ಪ್ರೇಕ್ಷಕರನ್ನು ಆಕರ್ಷಿಸಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಆದ ಅಮೃತ ವಿದ್ಯಾಲಯ ಮಂಗಳೂರು ಇದರ ಕ್ಯಾಂಪಸ್ ನಿರ್ದೇಶಕರು ಆದ ಶ್ರೀ ಯತೀಶ್ ಬೈಕಂಪಾಡಿ ಮಾತನಾಡಿ ಇಂದಿನ ಪೀಳಿಗೆಯ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಸ್ವಾದನಾಪ್ರಜ್ಞೆ ಬೆಳೆಸುವಲ್ಲಿ ಇಂತಹ ನಾಟಕಗಳು ಅತ್ಯಗತ್ಯ ಇಂತಹ ರಂಗೋತ್ಸವವನ್ನು ನಡೆಸಲು ಹೆಜ್ಜೆ ಇಟ್ಟ ಕಲಾಭಿ ಸಂಸ್ಥೆಗೆ ಶುಭನುಡಿಯನ್ನಿಟ್ಟರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅರೆಹೊಳೆ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀ ಅರೆಹೊಳೆ ಸದಾಶಿವ ರಾವ್ ಶುಭ ನುಡಿಯನ್ನಿತ್ತರು.
ನಟ, ನಿರ್ದೇಶಕ, ಬರಹಗಾರ ಶ್ರೀ ಜೆ.ಪಿ ತಮಿನಾಡ್, ಶ್ರೀ ಕೆ.ತೇಜೋಮಯ, ತುಳು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಂಜೀವ ಶೆಟ್ಟಿ ಸಿಲ್ಕ್ & ಸಾರೀಸ್ ಮಾಲಕರು ಆದ ಶ್ರೀ ಮುರಳೀಧರ್ ಶೆಟ್ಟಿ, ಕಶಾರ್ಪ್ ಫಿಟೈಸ್ ಕಲೆಕ್ಟಿವ್ ನ ನಿರ್ದೇಶಕರಾದ ಶ್ರೀ ಆನಂದ್ ಪ್ರಭು, ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಡಾ. ಅಭಿಷೇಕ್ ಕೃಷ್ಣ, ಕ್ರೆಡೈ ಮಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅರ್ಜುನ್ ರಾವ್ , ರಂಗಭೂಮಿ ಮತ್ತು ಚಲನಚಿತ್ರ ನಟ ಶ್ರೀ ಲಕ್ಷ್ಮಣ್ ಮಲ್ಲೂರು, ಸೂರ್ಯ ಕಾಂತಿ ಸೇವಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್, ವಿಜಾರ್ಡ್ ಕೇಬಲ್ ಮತ್ತು ಇಂಟರ್ನೆಟ್ ಸರ್ವಿಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಆದಿತ್ಯ ಕರ್ಕೇರ, ರೇಡಿಯೋ ಸಾರಂಗ್ ನ ಮುಖ್ಯ ಕಾರ್ಯಕ್ರಮ ನಿರ್ಮಾಪಕರು ಶ್ರೀ ಆರ್.ಜೆ ಅಭಿಷೇಕ್ ಶೆಟ್ಟಿ, ಕದಳಿ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಶ್ರೀ ನೇಮಿರಾಜ್ ಶೆಟ್ಟಿ, ಶ್ರೀ ಆರ್ ಜೆ ಕಿರಣ್, ಸೆಲೆಬ್ರೇಷನ್ ಬೈ ರಕ್ಷಾದ ಮಾಲೀಕರಾದ ಶ್ರೀಮತಿ ರಕ್ಷಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಾಭಿ (ರಿ ) ಸಂಸ್ಥೆ, ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ ನ ಎಲ್ಲಾ ಸದಸ್ಯರು ಹಾಗೂ ಹೆತ್ತವರು ಭಾಗವಹಿಸಿದ್ದರು . ಸಂಸ್ಥೆಯ ಅಧ್ಯಕ್ಷರಾದ ಡಾ. ಮೀನಾಕ್ಷಿ ರಾಮಚಂದ್ರ ಅತಿಥಿಗಳನ್ನು ಸ್ವಾಗತಿಸಿದರು, ಗೌರವಾಧ್ಯಕ್ಷರಾದ ಸುರೇಶ್ ವರ್ಕಾಡಿ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸದಸ್ಯೆಯಾ ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿರ್ದಿಗಂತ ಏರ್ಪಡಿಸಿದ ನೇಹದ ನಡಿಗೆ ಪ್ರಾಜೆಕ್ಟ್ ಭಾಗವಾಗಿ ಸಿದ್ಧಗೊಂಡ ಈ ಪ್ರಸ್ತುತಿ ಈಗಾಗಲೇ ಹಲವಾರು ರಂಗಮಂದಿರದಲ್ಲಿ ಪ್ರದರ್ಶನಗೊಂಡು ಜನಮನ ಗೆದ್ದಿದೆ. ಅಂತಾರಾಷ್ಟ್ರೀಯ ಮಟ್ಟದ ಪಪ್ಪೆಟ್ ರಂಗ ಕಾರ್ಯಾಗಾರದಲ್ಲೂ ಭಾಗವಹಿಸಿದ ಶ್ರವಣ್ ಹೆಗ್ಗೋಡು ರೆಕ್ಸ್‌ಅವರ್ಸ್, ಹಕ್ಕಿ ಕತೆ ಮುಂತಾದ ಹಲವು ಅದ್ಭುತ ಪಪ್ಪೆಟ್ ರಂಗ ಪ್ರಯೋಗಗಳ ಮೂಲಕ ಜನಪ್ರಿಯತೆ ಹೊಂದಿರುವ ಇವರು ಇದೀಗ ‘ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್’ ಮೂಲಕ ಹೃದಯ ಸ್ಪರ್ಶಿ ಕಥಾ ಹಂದರದೊಂದಿಗೆ ದೈತ್ಯ ಪಪ್ಪೆಟ್ ಆನೆಯನ್ನು ರಂಗದ ಮೇಲೆ ತಂದಿದ್ದಾರೆ . ಕಲಾಭಿ ತಂಡದ ಕಲಾವಿದರ ಮನಸ್ಪೂರ್ತಿಯ ಅಭಿನಯ ಮತ್ತೊಂದು ವಿಶೇಷವಾಗಿದೆ. ಮಂಗಳೂರು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಸೆಳೆಯುತ್ತಿರುವ ಕಲಾಭಿ ತಂಡದ ಈ ವಿನೂತನ ಪ್ರಯೋಗಕ್ಕೆ ಮಂಗಳೂರಿನ ಜನತೆ, ಹಾಗೂ ಕರಾವಳಿಯ ಗಣ್ಯ ಹಾಗೂ ದಿಗ್ಗಜ ಕಲಾವಿದರು ಸಾಕ್ಷಿಯಾಗಿದ್ದಾರೆ .