ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಕೊಡಿಯಾಲ್ಬೈಲ್ ಹಾಗೂ ವಳಚ್ಚಿಲ್ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜುಗಳೆರಡೂ ಶೇ. 100 ಫಲಿತಾಂಶ ಪಡೆದಿದ್ದು, ಶೇ. 99.94ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಅಭೂತಪೂರ್ವ ಸಾಧನೆ ಮಾಡಿವೆ.
ಒಟ್ಟು 1,560 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 590ಕ್ಕಿಂತ ಅಧಿಕ ಅಂಕಗಳನ್ನು 23 ವಿದ್ಯಾರ್ಥಿಗಳು, 580ಕ್ಕಿಂತ ಅಧಿಕ 193, ಶೇ. 95ಕ್ಕಿಂತ ಅಧಿಕ 400 ವಿದ್ಯಾರ್ಥಿಗಳು ಪಡೆದರೆ, ಶೇ.90ಕ್ಕಿಂತ ಅಧಿಕ 982, ಶೇ.85ಕ್ಕಿಂತ ಅಧಿಕ 1,286 ಹಾಗೂ ಶೇ.80ಕ್ಕಿಂತ ಅಧಿಕ 1,455 ವಿದ್ಯಾರ್ಥಿಗಳು ಪಡೆದಿದ್ದಾರೆ.
ಪರೀಕ್ಷೆ ಬರೆದ 1,560 ವಿದ್ಯಾರ್ಥಿಗಳಲ್ಲಿ 1,559 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.8 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 48 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 113 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 253 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್ನಲ್ಲಿ 15 ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ 147, ಬಯೋಲಾಜಿಯಲ್ಲಿ 271, ಮ್ಯಾಥಮೆಟಿಕ್ಸ್ನಲ್ಲಿ 186, ಕಂಪ್ಯೂಟರ್ ಸೈನ್ಸ್ನಲ್ಲಿ 4, ಇಲೆಕ್ಟ್ರಾನಿಕ್ಸ್ನಲ್ಲಿ 1, ಸಂಸ್ಕೃತದಲ್ಲಿ 29 ಹಾಗೂ ಕನ್ನಡದಲ್ಲಿ 5 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.595 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ನಿಖಿತಾ ವೈ. ರೇವದಕುಂಡಿ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದರೆ, 594 ಅಂಕ ಪಡೆದ ಶಾಶ್ವತಿ, ವಿ.ಅಕ್ಷತಾ ಕಾಮತ್ ಹಾಗೂ ಪಲ್ಲವಿ ಟಿ.ಎಸ್. ರಾಜ್ಯಕ್ಕೆ ಐದನೇ ಟಾಪರ್ ಆಗಿದ್ದಾರೆ.
ದಿಗ್ವಾಸಸ್ ಆರ್. ಪಾಟೀಲ್ 593, ದರ್ಶಿನಿ ಬಿ. ಹಾಗೂ ಮೇಘಾ ರಾವ್ 592, ರುಫೈದಾ ಎಸ್.ವಿ., ಶ್ವೇತಾ ಡಿ., ಅನ್ವಿತಾ ಬಿ.ಎನ್., ಹರ್ಷವರ್ಧನ್ ಕೆ., ಅಮರ್ ಸಾಂಚಿ, ಶ್ರದ್ಧಾ ರವೀಂದ್ರ ಮದ್ರಕಿ, ನಿಹಾರ್ ಎಸ್.ಆರ್. 591, ಸುರವಿ ಸುಧೀರ್, ಸೌಜನ್ಯ ಎ.ಎಂ., ಖುಷಿ ಶೆಟ್ಟಿ, ಬಾಲಸುಬ್ರಮಣ್ಯ ಎಸ್.ಕೆ., ರಕ್ಷಿತಾ ಎಚ್.ಎಸ್., ಶಿಶಿರ ಶಿವಕುಮಾರ್, ಬಿ.ಆರ್. ಶ್ರಾವಣಿ, ಎ.ಅನಘಾ ಪ್ರಭು, ಪಿ.ಎಸ್. ಪ್ರೇಮ್ 590 ಅಂಕ ಪಡೆದಿದ್ದಾರೆ.ದಿಗ್ವಾಸಸ್ ಆರ್.ಪಾಟೀಲ್, ರುಫೈದಾ ಎಸ್.ವಿ., ಶ್ರದ್ಧಾ ರವೀಂದ್ರ ಮದ್ರಕಿ, ಪರ್ಣಿಕಾ ಎನ್. ಪ್ರಭು, ಪ್ರಣವ್ ಟಾಟಾ ಆರ್., ಅಭಯ್ ಶರ್ಮಾ ಕೆ., ಸಂಜನಾ ಸಂತೋಷ್ ಕಟ್ಟಿ, ಸಹನಾ ರೆಬಿನಾಲ್ ನಾಲ್ಕು ವಿಷಯದಲ್ಲಿ ತಲಾ 100 ಅಂಕ ಪಡೆದಿದ್ದಾರೆ.
ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.
ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ.