ಮಣಿಪಾಲ:ಅರೆಹೊಳೆ ಪ್ರತಿಷ್ಠಾನವು, ಎರಡು ವರ್ಷಗಳ ಹಿಂದೆ ಅಗಲಿದ್ದ ಯುವ ರಂಗ ಕರ್ಮಿ ಮತ್ತು ನಂದಗೋಕುಲದ ವ್ಯವಸ್ಥಾಪಕ, ಕನಸು ಕಾರ್ತಿಕ್ ನೆನಪಲ್ಲಿ ಕಳೆದ ವರ್ಷದಿಂದ ನೀಡುತ್ತಿರುವ ರಾಜ್ಯ ಮಟ್ಟದ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರದ 2024 ನೆ ಸಾಲಿಗೆ ಯುವ ರಂಗ ನಿರ್ದೇಶಕ, ನಟ ಭುವನ್ ಮಣಿಪಾಲ್ ಆಯ್ಕೆಯಾಗಿದ್ದಾರೆ.
ಮಣಿಪಾಲದ ಭುವನ್, ನೀನಾಸಂ ಪದವೀಧರರಾಗಿ ಈಗಾಗಲೇ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ವಿಶೇಷವಾಗಿ ಮಕ್ಕಳ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು, ಅನೇಕ ರಂಗಶಿಬಿರಗಳನ್ನು ನಿರ್ವಹಿಸಿದ್ದು, ಇವರ ಒಟ್ಟೂಸಾಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ. ಸದ್ಯದಲ್ಲೇ ನಡೆಯಲಿರುವ ಕನಸು ಕಾರ್ತಿಕ ನೆನಪಿನ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ












