ಉಡುಪಿ: ಭಾರೀ ಸುಂಟರಗಾಳಿಗೆ ಉಡುಪಿ ಶ್ರೀ ಕೃಷ್ಣಮಠ ಅಶ್ವತ್ಥಕಟ್ಟೆಯ ಬೃಂದಾವನ ಕಟ್ಟಡದ ಮಾಡಿನ ಶೀಟುಗಳು ಹಾರಿ ಹೋಗಿವೆ. ಅಲ್ಲದೆ, ರಾಜಾಂಗಣದ ಬಳಿಯ ಹೋಟೆಲ್ ವೊಂದರ ಮೇಲ್ಚಾವಣಿ ಕೂಡ ಸುಂಟರಗಾಳಿಯ ಹೊಡೆತಕ್ಕೆ ಮುರಿದುಬಿದ್ದಿದೆ. ಇದರಿಂದ ಸಾಕಷ್ಟು ಹಾನಿ ಸಂಭವಿಸಿದೆ.
ಗುರುವಾರ ತಡರಾತ್ರಿ ಗಾಳಿ ಅಬ್ಬರಕ್ಕೆೆ ಜನತೆ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಾನಿ ಪ್ರಮಾಣ ಮುಂದುವರಿದಿದ್ದು, ಕುಂದಾಪುರ, ಬೈಂದೂರು ಭಾಗದಲ್ಲಿ ಗರಿಷ್ಠ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 70ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.