ಭಾರೀ ವರ್ಷಧಾರೆಗೆ ಬೈಂದೂರು ತಾಲೂಕಿನ ಗದ್ದೆ, ತಗ್ಗುಪ್ರದೇಶ ಜಲಾವೃತ; ಮುಳುಗಡೆಗೊಂಡ ಪ್ರದೇಶಗಳ ದೃಶ್ಯಾವಳಿ ಡ್ರೋನ್ ಕ್ಯಾಮರಾದಲ್ಲಿ ಸೆರೆ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಭಾರೀ ವರ್ಷಧಾರೆ ಆಗುತ್ತಿದ್ದು, ಗದ್ದೆ, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಜಲಾವೃತಗೊಂಡ ಪ್ರದೇಶಗಳು ದೃಶ್ಯಾವಳಿ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕಿನ ಸೌಪರ್ಣಿಕಾ, ಶಾಂಭವಿ, ಚಕ್ರ, ಪಂಚಗಂಗಾವಳಿ, ಎಡಮಾವಿನಹೊಳೆ ಹಾಗೂ ಕುಜ್ಜ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕಾಲುಸಂಕಗಳಲ್ಲಿ ನೀರು ಮೇಲೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಮಳೆ ನೀರು ರಸ್ತೆಯ ಮೇಲೆಯಿಂದಲೇ ಹರಿಯುತ್ತಿದ್ದು, ಅನೇಕ ಗ್ರಾಮದ ಸಂಪರ್ಕ ಕೊಂಡಿ ಕಡಿತಗೊಂಡಿದೆ.

Oplus_0
Oplus_0