ಬ್ರಹ್ಮಾವರ :- ಸೆ:22 ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಬ್ರಹ್ಮಾವರ, 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ರವಿವಾರ ಕೇಂದ್ರದ ಕಛೇರಿಯ ಹತ್ತಿರದ ನಾರಾಯಣಗುರು ಸಭಾಭವನದಲ್ಲಿ ಜರುಗಿತು.
ಅಧ್ಯಕ್ಷ ಸ್ಥಾನ ವಹಿಸಿಕೊಂಡ ಶ್ರೀ ಶಂಕರ ಪೂಜಾರಿ ಕುಕ್ಕುಡೆ ಇವರು ಆಡಳಿತ ಮಂಡಳಿಯ ಸಹಕಾರದೊಂದಿಗೆ ಪ್ರಸ್ತುತ ಸಾಲಿನಲ್ಲಿ 37 ಕೋಟಿ ದುಡಿಯುವ ಬಂಡವಾಳದೊಂದಿಗೆ 150 ಕೋಟಿ ರೂಪಾಯಿ ಒಟ್ಟು ವ್ಯವಹಾರವನ್ನು ನಡೆಸಲಾಗಿದೆ.
ಬಂದ ಲಾಭಾಂಶದಲ್ಲಿ ಶೇ.12% ಡಿವಿಡೆಂಡ್ ಸದ್ಯರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ “ಅ”ತರಗತಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಬ್ಯಾಂಕಿಂಗೇತರ ವ್ಯವಹಾರಗಳಾದ ಸೇಫ್ ಲಾಕರ್, ಆರ್.ಟಿ.ಜಿ.ಎಸ್., ನೆಫ್ಟ್, ವೆಸ್ಟರ್ನ ಯೂನಿಯನ್ ಮನಿಟ್ರಾನ್ಸ್ಫರ್, ವಿವಿಧ ವಿಮಾ ಸೌಲಭ್ಯ ಸದಸ್ಯರಿಗೆ, ಉಚಿತ ಎಸ್.ಎಮ್.ಎಸ್. ಸೌಲಭ್ಯ ಒದಗಿಸಲಾಗುತ್ತಿದೆ. ಎಂದು ಮಾಹಿತಿಯನ್ನು ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುರೇಶ್ ಎನ್.ಕರ್ಕೇರಾ ಲೆಕ್ಕಪತ್ರಗಳ ಮಂಡನೆ ಮಾಡಿದರು.
ಮಹಾಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಎನ್.ಶಂಕರ ಪೂಜಾರಿ ಸಂಘವು ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸಿರುವುದರ ಬಗ್ಗೆ ಮಾತನಾಡಿದರು.
ಉಪಾಧ್ಯಕ್ಷರಾದ ವಿಠಲ ಪೂಜಾರಿ ಹೆರಂಜೆ, ನಿರ್ದೇಶಕರಾದ ಅಚ್ಚುತ ಕೋಟ್ಯಾನ್ ಹೇರೂರು, ಕೃಷ್ಣ ಪೂಜಾರಿ ಅಮ್ಮುಂಜೆ, ಉಮೇಶ್ ಪೂಜಾರಿ ಬೆಳ್ಮಾರು, ನಾರಾಯಣ ಪೂಜಾರಿ ಉಗ್ಗೆಲ್‌ಬೆಟ್ಟು, ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ವಿಠಲ ಪೂಜಾರಿ ಮಟಪಾಡಿ ಇವರು ಸ್ವಾಗತಿಸಿದರು, ನಿರ್ದೇಶಕರಾದ ಸತೀಶ್ ಪೂಜಾರಿ ಉಗ್ಗೆಲ್‌ಬೆಟ್ಟು ಇವರು ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.












