ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ; ಎಪ್ಪತ್ತು ಅಡಿ ಉದ್ದದ ಧ್ವಜ ಮರದ ಪುರಪ್ರವೇಶ ಸಂಪನ್ನ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಈ ಅಪರೂಪದ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ಭಾಗವಾಗಿ ನೂತನ ಧ್ವಜ ಮರವನ್ನು ಸ್ಥಾಪಿಸಲಾಗುತ್ತಿದೆ. ಎಪ್ಪತ್ತು ಅಡಿ ಉದ್ದದ ಈ ಧ್ವಜ ಮರದ ಪುರ ಪ್ರವೇಶ ಅತ್ಯಂತ ಅದ್ದೂರಿಯಾಗಿ ನಡೆಯಿತು.

ಊರ ಮಾಗಣೆಯ ಗಡಿ ಪ್ರದೇಶವಾದ ಹೇರೂರಿನಿಂದ ಆಕಾಶವಾಣಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ಧ್ವಜಮರವನ್ನು ತಂದು, ಬಳಿಕ ಬ್ರಹ್ಮಾವರ ರಥ ಬೀದಿಯಲ್ಲಿ ವಾದ್ಯ ಘೋಷದೊಂದಿಗೆ ಮೆರವಣಿಗೆ ಸಾಗಿ ಬಂತು. ವಿವಿಧ ಭಜನಾ ತಂಡಗಳು, ಕಲಾತಂಡಗಳು ಹಾಗೂ ಸಾವಿರಾರು ಭಕ್ತರು ಈ ವೇಳೆ ಭಾಗವಹಿಸಿದ್ದರು. ಮಹತೋ ಭಾರ ಎಂಬ ಹಿರಿಮೆಗೆ ಪಾತ್ರವಾಗಿರುವ ಅಪರೂಪದ ಮಹಾಲಿಂಗೇಶ್ವರ ದೇವಸ್ಥಾನ ಇದಾಗಿದೆ.

Oplus_131072
Oplus_131072
Oplus_131072
Oplus_131072
Oplus_131072