ಬ್ರಹ್ಮಾವರ: ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಬ್ರಹ್ಮಾವರ: ಬ್ರಹ್ಮಾವರದ ವರಂಬಳ್ಳಿ ಗ್ರಾಮದ ಅಲಿಶಾ (26) ಎಂಬುವವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಲಾಗಿದೆ.

ಮೇ 29 ರಿಂದ ಆಗಸ್ಟ್ 16 ರ ನಡುವೆ, ಆರೋಪಿಯ ಖಾತೆಗೆ ದೂರುದಾರರು 8,96,448 ರೂ. ವರ್ಗಾಯಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ದಾಖಲಿಸಲು ವೆಬ್‌ಸೈಟ್ ಸಂಪರ್ಕಿಸಿದಾಗ ಅದರಲ್ಲಿಯೂ 37,000 ರೂ. ಆನ್ ಲೈನ್ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.