ಉಡುಪಿ: ನಾಡಿನಾದ್ಯಂತ ಹೋಳಿ ಹುಣ್ಣಿಮೆಯ ಸಂಭ್ರಮ ನಡೆಯುತ್ತಿದೆ. ಬಣ್ಣದ ಪುಡಿ, ರಂಗಿನ ನೀರು ಎರಚಿ ಜನ ಹೋಳಿ ಆಚರಣೆ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನಲ್ಲಿ ಕುಡುಬಿ ಸಮುದಾಯ ಸಾಂಪ್ರದಾಯಕ ಹೋಳಿ ಆಚರಣೆಯಲ್ಲಿ ತೊಡಗಿಸಿಕೊಂಡಿದೆ.
ವಿಭಿನ್ನ ವೇಷಭೂಷಣ, ಹೂವಿನ ಅಲಂಕಾರ ಮಾಡಿ ಗುಮ್ಟಿ ನುಡಿಸುತ್ತಾ ಹಾಡು ಹಾಡುತ್ತಾ ಸಾಂಪ್ರದಾಯಕ ಹೆಜ್ಜೆ ಹಾಕಿ ಕುಣಿಯುತ್ತಾರೆ. ಮಲ್ಲಿಕಾರ್ಜುನ ದೇವರ ಭಕ್ತರಾಗಿರುವ ಕುಡಬಿ ಸಮುದಾಯದ ನೂರಾರು ಜನ ಒಂದು ವಾರಗಳ ಕಾಲ ಕೂಡುಕಟ್ಟಿನ ಕುಟುಂಬದ ಮನೆಗಳಿಗೆ, ಆಹ್ವಾನ ನೀಡಿದ ಕಡೆ ತೆರಳಿ ನೃತ್ಯ ಸೇವೆಯನ್ನು ನೀಡುತ್ತಿದ್ದಾರೆ.












