ಬ್ರಹ್ಮಾವರ: ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಗಸ್ಟ್ 6 ರಂದು ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಈ ಮಹಾಸಭೆ 2023-24 ನೇ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿಷಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಗೊಂಡ 70 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ನಾಗರಾಜ ಅರಸ್ ಸಂಪ್ನಮೂಲ ವ್ಯಕ್ತಿಯಾಗಿ ಹಾಜರಿದ್ದು, ಪೋಷಕರ ಜವಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.


ಪ್ರಾಂಶುಪಾಲರಾದ ಲಯನ್ ಐವನ್ ದೊನಾತ್ ಸುವಾರಿಸ್ ಅವರು ಹೆತ್ತವರಿಗೆ ಶೈಕ್ಷಣಿಕ ಮಾಹಿತಿ ನೀಡಿದರು.
ಕಾಲೇಜಿನ ಸಂಚಾಲರಕರಾದ ರೆವೆರೆಂಡ್ ಫಾದರ್ ಎಮ್ ಸಿ ಮಥಾಯಿ ಅವರು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಪ್ರೇಮ್ ಡಿಸೋಜ ಉಪಸ್ತಿತರಿದ್ದರು.

2024-25ರ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಜೇಮ್ಸ್ ಡಿಸಿಲ್ವಾ ಕಾರ್ಯದರ್ಶಿಯಾಗಿ ಉಪನ್ಯಾಸಕ ಶ್ರೀ ಸಂತೋಷ್ ನೀಲಾವರ್, ಪೋಷಕ ಸದಸ್ಯರಾಗಿ ಶ್ರೀ ರವಿ, ಶ್ರೀ ಕೃಷ್ಣಮೂರ್ತಿ ಐತಾಳ್ ಹಾಗೂ ಸುಧಾಕರ ನಾಯಕ್, ಉಪನ್ಯಾಸಕ ಸದಸ್ಯರಾಗಿ ಶ್ರೀಮತಿ ಉಮಾ, ಶ್ರೀ ವಿಜಯ್ ಆಳ್ವ ಹಾಗೂ ಶ್ರೀ ರಾಘು ರವರು ಆಯ್ಕೆಯಾದರು.
ಸನ್ಮಾನಿತರ ಹೆಸರನ್ನು ಉಪನ್ಯಾಸಕರಾದ ಶ್ರೀ ರಾಘವೇಂದ್ರ ಐತಾಳ್ ಮತ್ತು ಶ್ರೀ ರವಿರಾಜ ನಕ್ಷತ್ರಿ ವಾಚಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವೈಷ್ಣವಿ ಅಡಿಗರವರು ಸ್ವಾಗತಿಸಿ, ಉಪನ್ಯಾಸಕ ಶ್ರೀ ರಾಘು ಕಾಡೂರು ವಂದಿಸಿದರು. ಶ್ರೀ ಸಂತೋಷ್ ನೀಲಾವರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಕುಮಾರಿ ಅಕ್ಷತಾ, ಶ್ರೀ ಗೋವಿಂದ್, ಕಿರಣ್ ಸಹಕರಿಸಿದರು. ಹೆತ್ತವರು, ಕಾಲೇಜಿನ ಉಪನ್ಯಾಸಕರು, ಬೋಧಕೇತರರು ಹಾಗೂ ವಿಧ್ಯಾರ್ಥಿಗಳು ಉಪಸ್ತಿತರಿದ್ದರು.












