ಬ್ರಹ್ಮಾವರ: ಉಪ್ಪು ನೀರಿನ ಕೃತಕ ನೆರೆ; ಹಲವು ಎಕರೆ ಕೃಷಿಭೂಮಿ ಜಲಾವೃತ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಕ್ಷಿಮಠ, ಪಾಂಡೇಶ್ವರ ಗ್ರಾಮ ಪಂಚಾಯಿತಿಯ ಸೂಲ್ಕುದು, ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಹಠಾತ್ ಉಪ್ಪು ನೀರಿನಿಂದ ಕೃತಕ ನೆರೆ ಉಂಟಾಗಿದೆ. ಇದರ ಪರಿಣಾಮ ಕೃಷಿ ಭೂಮಿ ಸಹಿತ ಮನೆಗಳು ಜಲಾವೃತಗೊಂಡಿವೆ.

Oplus_131072

ಏಕಾಏಕಿಯಾಗಿ ಕಾಣಿಸಿಕೊಂಡ ನೆರೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಸುಮಾರು ನಲವತ್ತುಕ್ಕೂ ಅಧಿಕ ಕೃಷಿ ಭೂಮಿಯಲ್ಲಿ ಉದ್ದು, ಅವರೆ ಸಹಿತ ಹಲವು ಬೆಳೆ ಬೆಳೆಯಲಾಗುತ್ತಿದ್ದು, ಪದೇಪದೇ ಉಂಟಾಗುವ ಉಪ್ಪುನೀರಿನ ಕೃತಕ ನೆರೆಯಿಂದಾಗಿ ಕೃಷಿ ಜೊತೆಗೆ ಕೃಷಿ ಭೂಮಿ ಬರಡಾಗುತ್ತಿದೆ. ಇನ್ನೂ ಕೆಲವೆಡೆ ತರಕಾರಿಗಳನ್ನು ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಉಪ್ಪುನೀರಿನ ಸಮಸ್ಯೆಯಿಂದ ಅವುಗಳಿಗೂ ಸಂಕಷ್ಟ ಎದುರಾಗಿದೆ. ಪಂಚಾಯತ್ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ