ಬ್ರಹ್ಮಾವರ: ಉಡುಪಿ ಜಿಲ್ಲೆ, ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ಆಕಾಶವಾಣಿ ವೃತ್ತದ ಬ್ರಹ್ಮಾವರ ನ್ಯಾಯಾಲಯದ ಹತ್ತಿರ “ಶೇಷಗೋಪಿ ಪ್ಯಾರಡೈಸ್” ಕಾಂಪ್ಲೆಕ್ಸ್ನಲ್ಲಿ ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಮತ್ತು ನ್ಯಾಯವಾದಿ ಕೆ. ಮನೀಷ್ ವಿ. ಶೆಟ್ಟಿಯವರ ಬ್ರಹ್ಮಾವರ ಶಾಖೆಯನ್ನು ನಿವೃತ್ತ ಉಪನ್ಯಾಸಕರಾದ ಹಾಲಾಡಿ ಕುದ್ರುಮನೆ ಶ್ರೀ ಕರುಣಾಕರ ಶೆಟ್ಟಿಯವರು ಅಮೃತ ಹಸ್ತದಿಂದ ದೀಪ ಬೆಳಗಿಸಿ ಉದ್ಘಾಟಿಸಿ ಶೀಘ್ರ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಶ್ರೀಮತಿ ವಿಜೇತಾ ಎಂ. ಶೆಟ್ಟಿ, ಶ್ರೀಮತಿ ವಿನುತಾ ಎಸ್. ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸದಾನಂದ ಪೂಜಾರಿ, ವಿದ್ಯುತ್ ಮೇಲ್ವಿಚಾರಕ ಕಾರ್ತಿಕ್ ನಾಯಕ್, ಡಾಕ್ಟರ್ ಶ್ರುತಿ ಕೆ. ಎಂ. ಪ್ರತಿಮಾ, ಸಹನಾ, ಅಮೃತ ಕೋಟ, ಸುಧಿಜ್ಞಾ, ಆನಂದ ಪೂಜಾರಿ, ಉದ್ಯಮಿ ಭೂಮಿ ಬಿಲ್ಡರ್ಸ್ ಶ್ರೀ ಬಿ. ಜಿ. ನಾಯಕ್, ರಾಜೇಶ್ ಶೆಟ್ಟಿ ಬೈಕಾಡಿ, ಪುಟಾಣಿಗಳಾದ ಆರ್ಯ, ಆದಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು ಹಾಗೂ ಬ್ರಹ್ಮಾವರ ಉಪನೋಂದಣಾಧಿಕಾರಿ ಶ್ರೀ ನಾಗರಾಜ್ ಓಲೇಕಾರ್, ವಕೀಲ ಮಿತ್ರರಾದ ಶ್ರೀ ಬಿರ್ತಿ ಮಿಥೇಶ್ ಜಿ. ಶೆಟ್ಟಿ ಹಾಗೂ ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧೀಂದ್ರ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.












