ಬ್ಯಾಂಕ್ ಆಫ್ ಬರೋಡಾ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ

ಮಂಗಳೂರು: ಬ್ಯಾಂಕ್ ಆಫ್ ಬರೋಡಾವು ತನ್ನ ಮಂಗಳೂರಿನ ವೀರಾಜ್ ಟವರ್ಸ್‌ನಲ್ಲಿರುವ ವಲಯ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಿತು.

ವಲಯ ಮುಖ್ಯಸ್ಥರಾದ ಶ್ರೀ ರಾಜೇಶ್ ಖನ್ನಾ ಅವರು ರಾಷ್ಟ್ರಧ್ವಜಾರೋಹಣ ನಡೆಸಿ, ಬ್ಯಾಂಕರ್‌ಗಳಾಗಿ ದೇಶ ಸೇವೆಗೆ ಮತ್ತು ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿಕೊಳ್ಳುವಂತೆ ಸಿಬ್ಬಂದಿಗೆ ಪ್ರೇರೇಪಿಸಿದರು.

ಶ್ರೀ ರಮೇಶ್ ಕಾನಡೆ, ಡಿಜಿಎಂ ಶ್ರೀ ಅಶ್ವಿನಿ ಕುಮಾರ್, ಡಿಜಿಎಂ; ಶ್ರೀ ಸನೀಲ್ ಕುಮಾರ್, ಮಂಗಳೂರು ನಗರದ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು, ಅಧಿಕಾರಿಗಳು ಮತ್ತು ಮಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಸ್ವಾತಂತ್ರ್ಯದ ಭಾವನೆಯನ್ನು ಪ್ರತಿಬಿಂಬಿಸುವ ಬಣ್ಣದ ಉಡುಗೆಗಳಲ್ಲಿ ಭಾಗವಹಿಸಿದರು. ಸುರಕ್ಷತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಮತ್ತು ಸುರಕ್ಷತಾ ಸಿಬ್ಬಂದಿಯ ನಿಸ್ವಾರ್ಥ ತ್ಯಾಗವನ್ನು ಸ್ಮರಿಸಿದರು.