ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ.

ಬೆಳ್ತಂಗಡಿ: ಮಹಿಳೆ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿ ಜುಲೈ 2ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರು ಜೋಡುಸ್ಥಾನ ನಿತ್ಯನೂತನ ಭಜನ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ (26).

ರಕ್ಷಿತಾ ಜೈನ್ ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ರಕ್ಷಿತಾ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಮೃತರು ತಂದೆ ವೀರಚಂದ್ರ ಜೈನ್, ತಾಯಿ ಅರುಣಾ, ಪತಿ ಸಂತೋಷ್ ಜೈನ್ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿರುತ್ತಾರೆ.