ಇಂದಿನಿಂದ ಪಾಪ್ ಅಪ್ ಮಾರ್ಕೆಟ್ ಮಂಗಳೂರು ಇದರ ದೀಪಾವಳಿ ಶಾಪಿಂಗ್ ಮೇಳ

ಮಂಗಳೂರು: ಪಾಪ್ ಅಪ್ ಮಾರ್ಕೆಟ್ ಮಂಗಳೂರು ವತಿಯಿಂದ ವಾರ್ಷಿಕ ಫ್ಲಿಯಾ ಮಾರುಕಟ್ಟೆಯ 7ನೇ ಆವೃತ್ತಿಯ ಜನಪ್ರಿಯ ದೀಪಾವಳಿ ಶಾಪಿಂಗ್ ಮೇಳ ಅ.19 ಮತ್ತು 20ರಂದು ಬೈಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆಯಲಿದೆ.

ಈ ಮೇಳದಲ್ಲಿ 50ಕ್ಕಿಂತಲೂ ಹೆಚ್ಚಿನ ಸ್ಟಾಲ್ ಗಳೊಂದಿಗೆ ಬಟ್ಟೆ, ಫ್ಯಾಷನ್ ಪರಿಕರಗಳು, ಚಿತ್ರಕಲೆ, ಮಕ್ಕಳ ಉಡುಪುಗಳು, ಮನೆಯ ಅಲಂಕಾರಿಕ ವಸ್ತುಗಳು, ಬೇಕರಿ, ಆಹಾರ ಮಳಿಗೆಗಳು ಇರಲಿದೆ. ಅಲ್ಲದೆ, ಮಕ್ಕಳಿಗಾಗಿ ಆಕ್ಟಿವಿಟಿ ಜೋನ್ ಗಳು, ರೊಬೋಟಿಕ್ ಮತ್ತು ಸೈನ್ಸ್ ಏರಿಯಾಗಳನ್ನು ಒಳಗೊಂಡಿದ್ದು, ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಉಚಿತ ಚಟುವಟಿಕೆ ವಲಯಗಳಾದ ಲಿಪ್ಪನ್ ಕಲೆ | ದೀಪಾವಳಿ ತೋರಣ | ಬಟರ್ಫ್ಲೈ ಹೂಪ್ ಅಲಂಕಾರ | ಅಕ್ರಿಲಿಕ್ ಪೇಂಟ್ | ಡೆಮೊ ಕಾರ್ಯಾಗಾರ ಜರುಗಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.


ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ :98678 75143 ಅನ್ನು ಸಂಪರ್ಕಿಸಬಹುದಾಗಿದೆ. @popupmangalore