ಬಿಲ್ಲಾಡಿ:ಖೇಚರಾವುತ ಟ್ರೋಫಿ-2025:2 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಿಲ್ಲಾಡಿ: ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಬಿಲ್ಲಾಡಿ ಇವರ ಆಶ್ರಯದಲ್ಲಿ ಎರಡನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜನವರಿ 26 ಸಂಜೆ 6 ಗಂಟೆಗೆ ಸರಿಯಾಗಿ ಸರಕಾರಿ ಪ್ರೌಢಶಾಲೆ ಜಾನುವಾರುಕಟ್ಟೆಯಲ್ಲಿ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಪುರುಷರ ಬಲಿಷ್ಠ 8 ವಾಲಿಬಾಲ್ ತಂಡಗಳ ಸೆಣಸಾಟ. ಹಾಗೂ ವಿದ್ಯಾರ್ಥಿನಿಯರಿಂದ ಉದ್ಘಾಟನಾ ಪಂದ್ಯ ಮತ್ತು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ತಂಡಗಳ ಸಮಾಗಮವು ಎಲ್ಲಾ ಕ್ರೀಡಾಭಿಮಾನಿಗಳ ಕುತೂಹಲತೆಯನ್ನು ಹೆಚ್ಚಿಸಿ, ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕಾಗಿ ವಿನಂತಿಸುವ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಬಿಲ್ಲಾಡಿ.