ಬೆಂಗಳೂರು: ಬಿಗ್ ಬಾಸ್ ಕನ್ನಡ -11 ಮನೆ ಫಿನಾಲೆಗೆ ಸಜ್ಜಾಗುತ್ತಿದೆ. ಟ್ರೋಫಿಯತ್ತ ಕಣ್ಣಿಟ್ಟು ನಾನೇ ವಿನ್ನರ್ ಆಗಬೇಕೆನ್ನುವ ಮನದಾಳದ ಮಾತನ್ನು ಸ್ಪರ್ಧಿಗಳು ಹೇಳುತ್ತಿದ್ದಾರೆ.
ಫಿನಾಲೆ ಸಮೀಪಕ್ಕೆ ಹೋಗಿ ಎಲಿಮಿನೇಟ್ ಆಗಿರುವ ಗೌತಮಿ ಹಾಗೂ ಧನರಾಜ್ ಅವರು ಮನೆಯಿಂದ ಆಚೆ ಬಂದು ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮಾತನಾಡುತ್ತಿದ್ದಾರೆ.
ಗೌತಮಿ ಜಾಧವ್ (Gautami Jadhav) ಅವರ ಬಿಗ್ ಬಾಸ್ ಪಯಣ ದೊಡ್ಮನೆಯಲ್ಲಿ ಗಮನ ಸೆಳೆದಿತ್ತು. ಪಾಸಿಟಿವಿಟಿ ಎಂದು ಹೇಳುತ್ತಲೇ ಪ್ರಬಲ ಸ್ಪರ್ಧಿಯಾಗಿ ಟಾಸ್ಕ್‌ಗಳಲ್ಲಿ ಭಾಗಿಯಾಗಿದ್ದರು. ಉಗ್ರಂ ಮಂಜು ಜತೆಗಿನ ಗೆಳತನ ಅವರ ಬಿಗ್ ಬಾಸ್ ಪಯಣವನ್ನು ಅವಿಸ್ಮರಣೀಯವಾಗಿಸಿತು ಎಂದರೆ ತಪ್ಪಾಗದು.
ಗೆಳೆಯ – ಗೆಳತಿ ಎಂದೇ ಗೌತಮಿ – ಮಂಜು ದೊಡ್ಮನೆಯಲ್ಲಿದ್ದರು. ಅವರ ನಡುವೆ ಎಷ್ಟೇ ವೈಮನಸ್ಸು ಅಥವಾ ಗೊಂದಲಗಳಾಗಿದ್ದರು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾ ಒಂದೊಳ್ಳೆ ಸ್ನೇಹಿತರಾಗಿ ದೊಡ್ಮನೆಯಲ್ಲಿದ್ದರು.ಆದರೆ ಇವರಿಬ್ಬರ ಆತ್ಮೀಯತೆಯನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಟ್ರೋಲ್‌ಗಳು ಹರಿದಾಡಿದ್ದವು. ʼಅಂಕಲ್ – ಆಂಟಿʼ ಎಂದು ಇಬ್ಬರನ್ನು ಕರೆದಿದ್ದರು. ʼಅಂಕಲ್ – ಆಂಟಿʼ ಲವ್ ಸ್ಟೋರಿ ಎಂದು ಕೆಲವು ಟ್ರೋಲ್ ಪೇಜ್‌ಗಳು ಟ್ರೋಲ್ ಮಾಡಿದ್ದವು.
ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ಈ ಬಗ್ಗೆ ಗೌತಮಿ ಅವರು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಟ್ರೋಲ್ ಗಳ ಮಾತನಾಡಿದ್ದಾರೆ.“ದೇವರ ದಯೆಯಿಂದ ನನ್ನ ಕುಟುಂಬದವರು ಇದನ್ನು ತುಂಬಾ ಸ್ಪೋರ್ಟಿವ್ ಆಗಿ ತಕ್ಕೊಂಡಿದ್ದಾರೆ. ನನಗೆ ಹೊಸದು, ಅವರು ಎರಡು – ಮೂರು ತಿಂಗಳಿನಿಂದ ಇದನ್ನು ನೋಡಿದ್ದಾರೆ. ಅವರು ಇದನ್ನು ಸ್ಪೋರ್ಟಿವ್ ಆಗಿ ತಕ್ಕೊಂಡಿದ್ದಾರೆ. ಏಕೆಂದರೆ ನಾನು ಏನು ಅಂಥ ಅವರಿಗೆ ಗೊತ್ತು. ಟ್ರೋಲ್ ಮಾಡುತ್ತಿರುವವರಿಗೆ ಖಂಡಿತವಾಗಿ ನಾನು ಹೇಗೆ – ಏನು ಅಂಥ ಗೊತ್ತಿರಲಿಲ್ಲ. ಆಟದಲ್ಲಿ ಅಷ್ಟೇ ನೋಡಿದ್ದಾರೆ. ಗೊತ್ತಿದಿದ್ರೆ ಟ್ರೋಲ್ ಮಾಡ್ತಾ ಇರಲಿಲ್ಲವೇನೋ” ಎಂದಿದ್ದಾರೆ.
“ಬಿಗ್ ಬಾಸ್ ಮನೆಯಲ್ಲಿ ಅಂಥದ್ದೇನು ಇರಲಿಲ್ಲ. ಲವ್ ಸ್ಟೋರಿ ಅನ್ನೋದೇ ಇರಲಿಲ್ಲ. ಇದು ನೀವು ನೋಡುವ ರೀತಿ. ಯಾರು ಯಾರನ್ನು ಬೇಕಾದ್ರು ಅಂಕಲ್ – ಆಂಟಿ ಅಂಥ ಕರೆಯಬಹುದು. ನನಗೆ ಅದರಿಂದ ಸಮಸ್ಯೆಯಿಲ್ಲ. ಲವ್ ಸ್ಟೋರಿ ಇರಲಿಲ್ಲ. ಉತ್ತಮ ಫ್ರೆಂಡ್ ಶಿಪ್ ಇತ್ತು ಎನ್ನುವ ಸ್ಪಷ್ಪನೆಯನ್ನು ನೀಡುತ್ತೇನೆ” ಎಂದು ಹೇಳಿದ್ದಾರೆ.
“ಇದೊಂದು ಜಸ್ಟ್ ಟ್ರೋಲ್. ಇದು ಅಭಿಪ್ರಾಯವಲ್ಲ. ಅಭಿಪ್ರಾಯಕ್ಕೂ ಟ್ರೋಲ್‌ಗೂ ವ್ಯತ್ಯಾಸ ಇರುತ್ತದೆ. ಲವ್ ಸ್ಟೋರಿ ಯಾವುದು ಇರಲಿಲ್ಲ. ನನ್ನ ಜೀವನದಲ್ಲಿ ಅಭಿಷೇಕ್ (ಗಂಡ) ಅವರೊಂದಿಗೆ ಮಾತ್ರ ಲವ್ ಸ್ಟೋರಿ ಇರೋದು. ಅದು ನನಗೆ ಏಳೇಳು ಜನ್ಮಕ್ಕೂ ಬೇಕು. ಹೊಸ ಸ್ಟೋರಿ ಯಾವುದು ಇಲ್ಲ. ನನ್ನ ಜೀವನದಲ್ಲಿ ಲವ್‌ಗೆ ಯಾವುದೇ ಕೊರತೆ ಇಲ್ಲ. ಲವ್ ಸ್ಟೋರಿ ಇಲ್ಲ. ಫ್ರೆಂಡ್ ಶಿಪ್ ಸ್ಟೋರಿ ಇದೆ. ದಯವಿಟ್ಟು ಇದನ್ನು ಆ ರೀತಿ ತೆಗೆದುಕೊಂಡು ಹೋಗಬೇಡಿ ಎಂದಿದ್ದಾರೆ.












