ಬಿಗ್ ಬಾಸ್-11:ಭವ್ಯಾ ಬಗ್ಗೆ ತ್ರಿವಿಕ್ರಮ್ ಪ್ರತಿಕ್ರಿಯೆ: “ಭವ್ಯಾಳನ್ನು ಮದುವೆ ಆಗಲ್ಲ, ಅವಳು ನನಗೆ ಚಿಕ್ಕವಳಾದ್ಲು” ಎಂದಿದ್ದಾರೆ

ಬೆಂಗಳೂರು: ವೀಕ್ಷಕರು ಕೊಟ್ಟ ಪ್ರೀತಿ ಪ್ರೋತ್ಸಾಹ ಹಾಗೂ ಕೋಟಿ ಕೋಟಿ ವೋಟ್ಸ್‌ಗಳ ಮೂಲಕ ಬಿಗ್‌ ಬಾಸ್‌ ಕನ್ನಡ -11 ರ ಟ್ರೋಫಿಯನ್ನು ಹನುಮಂತು ಅವರು ತಮ್ಮದಾಗಿಸಿಕೊಂಡಿದ್ದಾರೆ.

ಹನುಮಂತು ಅವರಿಗೆ ಅಭಿನಂದನೆಗಳ ಸುರಿಮಳೆಯೇ ಬರುತ್ತಿದೆ. ರನ್ನರ್‌ ಅಪ್‌ ಹೊರಹೊಮ್ಮಿದ ತ್ರಿವಿಕ್ರಮ್‌ ಅವರ ಜರ್ನಿಯೂ ಹನುಮಂತು ಅವರಂತೆ ಕಲರ್‌ ಫುಲ್‌ ಆಗಿತ್ತು. ಹನುಮಂತು ಗೆದ್ದ ಬಳಿಕ ತ್ರಿವಿಕ್ರಮ್‌ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜತೆ ತಮ್ಮ ಮದುವೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

“ಹನುಮಂತು ಒಂದು ತರ ನಾಟಿ ತಳಿ. ನಮಗೆ ಕನ್ನಡಕ್ಕೆ ಸಿಕ್ಕಿರುವ ಗಿಫ್ಟ್.‌ ಅವನು ತುಂಬಾ ಚೆನ್ನಾಗಿ ಹಾಡುತ್ತಾನೆ, ಒಳ್ಳೆಯ ವ್ಯಕ್ತಿತ್ವ ಅವನು ಇದೇ ತರ ಇರಲಿ. ಮದುವೆ ಆಗ್ತಾ ಇದ್ದಾನೆ. ಅದಕ್ಕೆ ಕಂಗ್ರಾಜುಲೇಷನ್ಸ್. ಅವನು ಗೆದ್ದಿದ್ದು ನನಗೆ ಬೇಜಾರಿಲ್ಲ” ಎಂದಿದ್ದಾರೆ.

ಇನ್ನು ತ್ರಿವಿಕ್ರಮ್‌ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. “ಹುಡುಕಬೇಕು. ಯಾರು ಸಿಗ್ತಾರೆ ಏನು ಅಂಥ. ಯಾರಾದ್ರು ನೋಡಿ ಕಟ್ಟಿಕೊಳ್ಳುವವರು ಸಿಕ್ಕರೆ ಆಗ್ತೀನಿ” ಎಂದಿದ್ದಾರೆ.ಭವ್ಯಾ ಅವರ ಬಗ್ಗೆ ಕೇಳಿದಾಗ, “ಭವ್ಯಾ ಚಿಕ್ಕವಳು ಆದ್ಳು ನನಗೆ” ಎಂದಿದ್ದಾರೆ.

ದೊಡ್ಮನೆಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್‌ ಅವರ ಗೆಳತನ ಸದ್ದು ಮಾಡಿತ್ತು. ಇಬ್ಬರು ಆತ್ಮೀಯವಾಗಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಭವ್ಯಾ ಅವರಿಗೆ ತ್ರಿವಿಕ್ರಮ್‌ ಪ್ರಪೋಸ್‌ ಕೂಡ ಮಾಡಿದ್ದರು.