ಬಾರ್ಕೂರು ನೇಶನಲ್ ಐ.ಟಿ.ಐ ಹೇರಾಡಿಯಲ್ಲಿ ಮಹಿಳಾ ಅಭ್ಯರ್ಥಿಗಳ ತರಬೇತಿಗೆ ವಿಶೇಷ ಅವಕಾಶ.

ಬಾರ್ಕೂರು: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ) ಇದರ ಆಡಳಿತಕ್ಕೊಳಪಟ್ಟ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯು 1984 ರಲ್ಲಿ ಪ್ರಾರಂಭಗೊಂಡು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರು ಪಡೆದಿದೆ.

ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (National Council for Vocational Training) ನೊಂದಿಗೆ ಸಂಯೋಜನೆ ಹೊಂದಿದ ಸಂಸ್ಥೆಯಾಗಿದ್ದು, 40 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯು ದಿನೇ ದಿನೇ ಬೆಳೆದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಪಡೆದಿದೆ.

ಕೇವಲ ಎರಡೇ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ನಮ್ಮ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ ಮಹತ್ತರ ಪಾತ್ರವನ್ನು ವಹಿಸಿದೆ.

2 ವರ್ಷ ಅವದಿಯ ಇಲೆಕ್ಟ್ರೀಷಿಯನ್, ಫಿಟ್ಟರ್ (ಜನರಲ್ ಮೆಕ್ಯಾನಿಕ್), ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಅಟೋಮೊಬೈಲ್), ಇಲೆಕ್ಟ್ರಾನಿಕ್ ಮ್ಯಾಕಾನಿಕ್ ಹಾಗೂ ಒಂದು ವರ್ಷ ಅವಧಿಯ ವೆಲ್ಡರ್ (ಫ್ಯಾಬ್ರಿಕೇಶನ್) ವಿಭಾಗಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಎಸ್.ಎಸ್.ಎಲ್.ಸಿ ಪಾಸ್, ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ನಮ್ಮ ಸಂಸ್ಥೆಗೆ ಸೇರಿ ಕೇವಲ 2 ವರ್ಷ ತಾಂತ್ರಿಕ ಶಿಕ್ಷಣವನ್ನು ಮುಗಿಸಿ ಸ್ವಾವಲಂಭಿಗಳಾಗಿ ಅಥವಾ ಉತ್ತಮ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಬಹುದಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಪ್ರತಿ ವರ್ಷ ಹಲವು ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂ ಮಾಡುತ್ತಾ ಬಂದಿರುತ್ತೇವೆ.

ಮಹಿಳಾ ಅಭ್ಯರ್ಥಿಗಳ ತರಬೇತಿಗೆ ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವೃತ್ತಿಯಲ್ಲಿ ವಿಶೇಷ ಅವಕಾಶಗಳಿವೆ. ಸಂಸ್ಥೆಯ ಉಳಿದ ಕೆಲವೇ ಸೀಟುಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಕೂಡಲೇ ಕಛೇರಿಯಿಂದ ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಸೇರಬಹುದು ಎಂದು ಬಾರ್ಕೂರು ಹೇರಾಡಿ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆ ತಿಳಿಸಿದ್ದಾರೆ.