ಬ್ರಹ್ಮಾವರ:ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ನಮ್ಮ ನೇಶನಲ್ ಐಟಿಐನಲ್ಲಿ ಆಯುಧ ಪೂಜಾ ಕಾರ್ಯಕ್ರಮವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳ ಅತ್ಯುತ್ತಮ ಶ್ರಮದಿಂದ ವಿಜ್ರಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ನಿವ್ರತ್ತ ಪ್ರಾಂಶುಪಾಲರಾದ ಬಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಶೆಟ್ಟಿ, ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತ ಸಂಯೋಜಕಾದ ಆರ್ಚಿಬಾಲ್ಡ್ ಫುರ್ಟಾಡೋ, ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ದಿನಕರ್ ತೋಳಾರ್, ಹೇರಾಡಿ ಪ್ರಾಥಮಿಕ ಶಾಲೆಯ ಸಂಚಾಲಕರಾದ ರತ್ನಾಕರ್ ಶೆಟ್ಟಿ, ಹನೆಹಳ್ಳಿ ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀನಿವಾಸ ಶೆಟ್ಟಿಗಾರ್, ಆಡಳಿತ ಮಂಡಳಿಯ ಸದಸ್ಯರಾದ ನಿವ್ರತ್ತ ಮುಖ್ಯೋಪಾಧ್ಯಾಯರಾದ ಸುಧಾಕರ ರಾವ್ ಹಾಗೂ ನಮ್ಮ ಸಂಸ್ಥೆಯ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದಾ ಸಂಸ್ಥೆಯ ಏಳಿಗೆಯನ್ನು ಬಯಸುವ ಸಂಸ್ಥೆಯ ಸಂಚಾಲಕರಾದ ನಿವ್ರತ್ತ ಸಿಂಡಿಕೇಟ್ ಬ್ಯಾಂಕ್ ಆಫೀಸರ್ ಬಿ.ರಾಮಚಂದ್ರ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ಬಿ.ಕೆ.ಕೊಠಾರಿ, ಹನೆಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ಶೆಟ್ಟಿ, ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಉದಯ ಶೆಟ್ಟಿ, ಹಾಗೂ ಊರ ಮಹನೀಯರುಗಳು ಆಗಮಿಸಿದ್ದರು.
ಹಳೆ ವಿದ್ಯಾರ್ಥಿ ಕೃಷ್ಣ ಪ್ರಸಾದ್ ಮಧ್ಯಸ್ಥ ಅವರು ಸಂಸ್ಥೆಗೆ ಉಚಿತವಾಗಿ ಜೆರಾಕ್ಸ್ ಮಿಷಿನ್’ಅನ್ನು ನೀಡಿದರು.
ವಿಶೇಷವೆಂದರೆ ಈ ವರ್ಷ ಪೂಜಾ ಕಾರ್ಯಕ್ರಮಕ್ಕೆ ನೂತನವಾಗಿ ಸ್ಥಾಪನೆಗೊಂಡ “ಹಳೆ ವಿದ್ಯಾರ್ಥಿ ಸಂಘ”ದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ ಮಾಲಕರು ಮಲ್ನಾಡ್ ಕ್ಯಾಶ್ಯೋಸ್ ಇಂಡಸ್ಟ್ರೀಸ್ ಹೆಂಗವಳ್ಳಿ, ಉಪಾಧ್ಯಕ್ಷ ರಾದ ವಿನೋದ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ, ಖಜಾಂಚಿಯಾದ ಅಜಿತ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶ್ರೀ ಸುಕುಮಾರ್ ಶೆಟ್ಟಿ ಮತ್ತು ಮಮತಾ, ಹಳೆ ವಿದ್ಯಾರ್ಥಿ ಗೋಪಿನಾಥ್ ಹಾಗೂ ಇನ್ನೂ ಕೆಲವು ಹಳೆ ವಿದ್ಯಾರ್ಥಿ ಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದರು.
ಪೂಜಾ ಕಾರ್ಯಕ್ರಮವನ್ನು ವೇದಮೂರ್ತಿ ಕೂಡ್ಲಿ ಶ್ರೀ ಗಣಪತಿ ಉಡುಪರು ನೆರವೇರಿಸಿಕೊಟ್ಟರು. ಸಂಸ್ಥೆಯ ಸಿಬ್ಬಂದಿಗಳಾದ ಹರೀಶ್ ಹೆಬ್ಬಾರ್ ಮತ್ತು ಸುದರ್ಶನ ಉಡುಪ ಇವರುಗಳು ಪೂಜಾ ಕಾರ್ಯಕ್ರಮ ಸಾಂಗವಾಗಿ ನೆರವೇರುವಲ್ಲಿ ಸಹಕರಿಸಿದರು.
-ವೆಂಕಟೇಶ ಕ್ರಮಧಾರಿ, ಪ್ರಾಂಶುಪಾಲರು, ನೇಶನಲ್ ಐಟಿಐ ಬಾರ್ಕೂರು.