ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ “ವರ್ಣೋತ್ಸವ ೨ಕೆ೨೫” ಇದರ ಸಮಾರೋಪ ಸಮಾರಂಭವು 21 ಮಾರ್ಚ್ ೨ಕೆ೨೫ ರಂದು ಕಾಲೇಜಿನ ಆವರವಣದಲ್ಲಿ ವಿಜೃಂಬಣೆಯಿಂದ
ಜರುಗಿತು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ
ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ
ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಶ್ರೀಪಾದರು
ತಮ್ಮ ಆಶೀರ್ವಚನದಲ್ಲಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು
ನಮ್ಮ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸುವುದರ
ಜೊತೆಗೆ ಮಾನವೀಯತೆಯ ಮೌಲ್ಯಗಳಿಗೆ ಪ್ರಾಮುಖ್ಯತೆ
ನೀಡಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ವಿನೋದ್ ಜಾನ್, ಪ್ರಾಕ್ಟಿಸ್ ಹೆಡ್ ಅನಾಲಾಗ್,ಮಿರಾಫ್ರ ಟೆಕ್ನಾಲಜೀಸ್, ಬೆಂಗಳೂರು ಇವರು ಭಾಗವಹಿಸಿದ್ದರು.ಇವರು ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಕಾಲೇಜಿನ ದಿನಗಳ ನೆನಪುಗಳನ್ನು ಮೆಲಕು ಹಾಕಿದರು. ಪ್ರತಿಫಲಾಪೇಕ್ಷೆಯಿಲ್ಲದೆ ಕಠಿಣ ಪರಿಶ್ರಮದಿಂದ
ಕಾರ್ಯನಿರ್ವಹಿಸಿದರೆ ಅಂದುಕೊಂಡ ಗುರಿಸಾಧಿಸಲು
ಸಾಧ್ಯವಾಗುತ್ತದೆ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ಖ್ಯಾತ ಚಿತ್ರರಂಗ ಕಲಾವಿದರಾದ ಶ್ರೀ ಪೃಥ್ವಿ
ಅಂಬರ್ ಭಾಗವಹಿಸಿ ಮಾತನಾಡಿ ಸೋದೆ ಶ್ರೀ ಪಾದರ ಜೊತೆಗಿನ ತಮ್ಮ ಬಾಂದವ್ಯವನ್ನು ಸ್ಮರಿಸಿದರು. ತಾವು ನೃತ್ಯಕಲೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದ ದಾರಿಯನ್ನು ವಿವರಿಸಿದರು.
ಇದಲ್ಲದೆ ನಮ್ಮ ಬದುಕಿನಲ್ಲಿ ಬೇರೆಯವರ ಜೀವನಕ್ಕೆ ಬೆಳಕಾಗುವ ಕೆಲಸ ಮಾಡಬೇಕೆಂದು ಕರೆಯಿತ್ತರು.
ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ
ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ
ವಿತರಿಸಲಾಯಿತು. ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜು ಇವರು ವರ್ಣೋತ್ಸವ ೨ಕೆ೨೫ ಇದರ ಚಾಂಪಿಯನ್‌ಶಿಪ್ ಬಹುಮಾನ ಪಡೆದುಕೊಂಡರೆ ಎಸ್ ಡಿ ಎಮ್ ಪಿಜಿ ಸೆಂಟರ್ ದ್ವಿತೀಯ ಸ್ಥಾನದೊಂದಿಗೆ
ರನ್ನರ್ ಅಪ್ ಬಹುಮಾನ ಪಡೆದುಕೊಂಡಿತು.

ಶ್ರೀ ಸೋದೆ ವಾದಿರಾಜ ಮಠದ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ ತಂತ್ರಿ, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್,
ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳ ಸಂಯೋಜಕರಾದ ಡಾ. ರೆನಿಟಾ ಶರೋನ್ ಮೋನಿಸ್ ಮತ್ತು ಶ್ರೀ ವರುಣ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಶ್ರೀ
ಅರುಣ್ ಉಪಾಧ್ಯಾಯ ಸ್ವಾಗತಿಸಿದರು. ಡಾ. ರೆನಿಟಾ ಶರೋನ್
ಮೋನಿಸ್ ೨ಕೆ೨೫ ಇದರ ವರದಿಯನ್ನು ವಾಚಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರೀಯ ಕ್ಯಾಸ್ತಲಿನೋ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸವಿತ ಶೆಣೈ ಮತ್ತು ಶ್ರೀ ನಾಗರಾಜ್ ರಾವ್ ಇವರು ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿಗಳಾದ ಸುಮಯ್ಯ ರಿಯಾಝ್ ಮತ್ತು ವೈಭವ್
ಕಾರ್ಯಕ್ರಮವನ್ನು ನಿರೂಪಿಸಿದರು. ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ. ದೀಪಿಕಾ ಬಿ ವಿ ವಂದಿಸಿದರು. ಸಂಜೆ ಕಾಲೇಜಿನ ಯಕ್ಷಗಾನ ಸಂಘ “ಯಕ್ಷಸಿಂಚನ”ದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.













