ಬಂಟಕಲ್ ಇಂಜಿನಿಯರಿಂಗ್ ಕಾಲೇಜು: “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್” ಮಿನಿ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ.

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಹ ಪಠ್ಯೇತರ ಕೋಶ, ಹವ್ಯಾಸಿ ಪ್ರಾಜೆಕ್ಟ್ ಕ್ಲಬ್, ಐ ಎಸ್ ಟಿ ಇ ವಿದ್ಯಾರ್ಥಿ ಘಟಕ ಮತ್ತು ಇನ್ಸ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್
ಸಹಯೋಗದೊಂದಿಗೆ ಜೂನ್ 8 ರಂದು “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್” ಎಂಬ ವಿಷಯದಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಮಿನಿ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ಭಾರ್ಗವ ರಾಮ್ ಉಡುಪ, ಸಾಫ್ಟ್ ವೇರ್ ಇಂಜಿನಿಯರ್ ಬೆಂಗಳೂರು ಇವರು ಉದ್ಘಾಟಿಸಿದರು. ಇವರು ಮಿನಿ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದರು ಹಾಗೂ ತಮ್ಮ ಕಾಲೇಜಿನ
ದಿನಗಳಲ್ಲಿ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಿಂದ ಪಡೆದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ಜ್ಞಾನವನ್ನು ನಮ್ಮಿಂದ ಯಾರು ಕಸಿದು ಕೊಳ್ಳಲು ಸಾಧ್ಯವಿಲ್ಲ ನಾವು ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳು ಇಂತಹ ಪ್ರಾಜೆಕ್ಟ್ ಗಳಲ್ಲಿ ಭಾಗವಹಿಸಬೇಕು ಎಂದರು.

ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಒಟ್ಟು 66 ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ಇದರಲ್ಲಿ ಒಟ್ಟು 6 ಪ್ರಾಜೆಕ್ಟ್ ಅನ್ನು ಅತ್ಯುತ್ತಮ ಪ್ರಾಜೆಕ್ಟ್ ಎಂದು ಆಯ್ಕೆ ಮಾಡಿ ನಗದು ಬಹುಮಾನವನ್ನು ನೀಡಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲರಾದ ಡಾ ಗಣೇಶ್ ಐತಾಳ್, ಡೀನ್‍ಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಂಸ್ಥೆಯ ಸಹ ಪಠ್ಯೇತರ ಚಟುವಟಿಕೆಯ ಸಂಯೋಜಕರಾದ ಡಾ.ರೆನಿಟಾ ಶರೋನ್ ಮೋನಿಸ್ ಕಾರ್ಯಕ್ರಮವನ್ನು ಸಂಯೋಜಿಸಿದರು,
ವಿದ್ಯಾರ್ಥಿನಿಯಾದ ಧನ್ಯ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.