ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರ‍್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವು ದಿನಾಂಕ 19 ಮಾರ್ಚ್ 2025 ರಂದು ಜರುಗಿತು.
ಕ್ರೀಯೇಟಿವ್ ಎಜುಕೇಶನ್ ಫೌಂಡೇಶನ್, ಮೂಡಬಿದ್ರೆ ಇಲ್ಲಿನ
ಸಹ-ಸಂಸ್ಥಾಪಕರಾದ ಡಾ. ಬಿ. ಗಣನಾಥ ಶೆಟ್ಟಿ ಇವರು ಮುಖ್ಯ
ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದು ದೈಹಿಕ
ಸದೃಢತೆಗೆ ಮತ್ತು ಮಾನವನ ಜೀವನದಲ್ಲಿ ಮಾನಸಿಕ
ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದರು. ಈ
ಸಂದರ್ಭದಲ್ಲಿ ಅವರು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಬಹುಮಾನವನ್ನು ನೀಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ
ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪೌಲ್ ಸೂರಜ್, ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿಗಳು ಮತ್ತು
ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರಾಮಯ ನರ್ಸಿಂಗ್ ಮತ್ತು
ಎಲೈಡ್ ಹೆಲ್ತ್ ಸೈನ್ಸ್ನ ವಿದ್ಯಾರ್ಥಿಗಳ ತಂಡವು
ಪಥಸಂಚಲನದಲ್ಲಿ ಉತ್ತಮ ತಂಡ ಪ್ರಶಸ್ತಿ ಗಳಿಸಿತು.
ಕ್ರೀಡಾ ಕಾರ್ಯದರ್ಶಿ ಸಮೀಕ್ಷಾ ಕ್ರೀಡಾ ಪ್ರತಿಜ್ಞಾ
ವಿಧಿಯನ್ನು ಭೋದಿಸಿ, ಅಭಿಷೇಕ್ ವಂದಿಸಿದರು.














