ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಲೀಕರಣ ಘಟಕವು ಕಾಲೇಜಿನ ಆಂತರಿಕ ದೂರು ಘಟಕದ ಸಹಯೋಗದೊಂದಿಗೆ 13 ಮಾರ್ಚ್ 2025 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು.

ಶ್ರೀಮತಿ ಚಂದ್ರಾಣಿ ಸರ್ಕಾರ್, ಮಾನವ ಸಂಪನ್ಮೂಲ ಮುಖ್ಯಸ್ಥರು, ಯುನಿಕೋರ್ಟ್, ಮಂಗಳೂರು ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳು ಮಾತನಾಡಿ ಇಂಧನ ಕಾರ್ಪೋರೇಟ್ ಜಗತ್ತಿನಲ್ಲಿ ಗಂಡು ಹೆಣ್ಣಿಗಿಂತ ಅವರ ಜ್ಞಾನ ಮತ್ತು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವ್ಯಕ್ತಿಗಳಲ್ಲಿ ಅಡಗಿರುವ ಪ್ರತಿಭೆಗಳು ಅವರ ಲಿಂಗ ಭೇದವನ್ನು ಮೀರಿ ಗುರುತಿಸಲಾಗುತ್ತದೆ.

ಲಿಂಗ ತಾರತಮ್ಯ ನಿವಾರಿಸಲು ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಬಲೀಕರಣ ಗೊಳಿಸುವುದು ಅತ್ಯಗತ್ಯ. ಉತ್ತಮ ಸಾಧನೆ ಮಾಡಲು ವ್ಯಕ್ತಿಗಳು ಆದ್ಯತೆಯ ಬಗ್ಗೆ ಗಮನಹರಿಸಿ ಸಂಘಟನೆ, ಶಿಸ್ತು ಮತ್ತು ಸವಾಲುಗಳನ್ನು ಎದುರಿಸಿ ನಿಲ್ಲುವ
ಸಾಮರ್ಥ್ಯ ಹೊಂದಿರಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು
ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಹಿಳಾ ದಿನದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಮತ್ತು ಮಹಿಳಾ ಸಿಬ್ಬಂದಿಗಳಿಗಾಗಿ
ಕೆಲವು ಆಟಗಳನ್ನು ನಡೆಸಲಾಯಿತು.












