ಬಂಟಕಲ್:ಬಂಟಕಲ್ ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜಿನ “ಆಸರೆ” ಸಮಾಲೋಚನ ಘಟಕದ ವತಿಯಿಂದ ಉಡುಪಿಯ “ಆಶಾನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ದಿನಾಂಕ 30 ನವೆಂಬರ್ 2024 ರಂದು ಭೇಟಿ ನೀಡಿದರು.
ಈ ಭೇಟಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್
ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷಚೇತನ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಂಡರು.
ಆಶಾ ನಿಲಯದ ಮಕ್ಕಳಿಗಾಗಿ ವಿದ್ಯಾರ್ಥಿಗಳು ನೃತ್ಯ, ಸಂಗೀತ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಕ್ಕಳನ್ನು ರಂಜಿಸಿದರು. ಈ ಭೇಟಿಯು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ ಮತ್ತು ಬಾಂದವ್ಯ ಬೆಳೆಸಲು
ಸಹಾಯಕವಾಗಿದೆ.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ಇಂತಹ ಕಾರ್ಯಕ್ರಮಗಳನ್ನು
ಆಯೋಜಿಸುವುದರಿಂದ ವಿದ್ಯಾರ್ಥಿಗಳ ದೃಷ್ಟಿಕೋನವನ್ನು ವಿಸ್ತರಿಸುವುದಲ್ಲದೆ ಸಾಮಾಜಿಕ ಹೊಣೆಗಾರಿಕೆಯನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಈ ಕಾರ್ಯಕ್ರಮವನ್ನು ಸಮಾಲೋಚನ ಘಟಕದ
ಸಂಯೋಜಕರಾದ ವಿದ್ಯಾಭಟ್, ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಮತ್ತು ಡಾ.ದೀಪಿಕಾ ಬಿ. ವಿ. ಸಂಯೋಜಿಸಿದರು.