ಉಡುಪಿ: ರಾಷ್ಟ್ರ ಸಂತ, ಹಿಂದುತ್ವದ ಪ್ರತಿಪಾದಕ, ದಲಿತ ಕೇರಿಗಳಿಗೆ ಭೇಟಿ ಕೊಡುವ ಮೂಲಕ ದೇಶದಲ್ಲಿ 60 ನೇ ದಶಕದಲ್ಲೇ ಸಂಚಲನ ಮೂಡಿಸಿದ್ದ ಪೇಜಾವರ ಶ್ರೀಗಳು ಬೃಂದಾವನಸ್ಥರಾಗಿ ಐದು ವರ್ಷ ಕಳೆಯಿತು.
ಉಡುಪಿಯ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನೋತ್ಸವ ನಡೆಯಿತು. ಸ್ವಾಮೀಜಿಗಳ ಭಾವಚಿತ್ರ ಪಾದುಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು ಮಠಕ್ಕೆ ಬರುವ ಭಕ್ತರಿಗೆ ಮಂತ್ರಾಕ್ಷತೆ, ವಿಶೇಷ ಪ್ರಸಾದ ವಿತರಿಸಲಾಯ್ತು.